ಕರ್ನಾಟಕ

karnataka

ETV Bharat / city

ಅಂತೂ ಇಂತೂ ಪೂರ್ಣಗೊಂಡಿತು ಕಾಮಗಾರಿ... ನಿಟ್ಟುಸಿರು ಬಿಟ್ಟು ಖುಷಿಯಾದ ಬಿಸಿಲೂರ ಮಂದಿ - Kalburgi

ಆರು ತಿಂಗಳ ಹಿಂದೆ ಪ್ರಾರಂಭವಾದ ಜೇವರ್ಗಿ ಮುಖ್ಯರಸ್ತೆ ಬಳಿ ಇರುವ ಎನ್​ಜಿಒ ಕಾಲೋನಿಯಲ್ಲಿ ನಿರ್ಮಿಸಲಾದ ರೈಲ್ವೆ ಮೇಲ್ಸೇತುವೆ ಕಾಮಗಾರಿ ವೇಗವಾಗಿ ಪೂರ್ಣಗೊಂಡಿದ್ದು, ಸಂಚಾರ ಸುಗಮವಾಗಲಿದೆ.

ರೈಲ್ವೆ ಮೇಲ್ಸೇತುವೆ ಕಾಮಗಾರಿ ಬಹುತೇಕ ಪೂರ್ಣ

By

Published : Jun 14, 2019, 1:25 PM IST

ಕಲಬುರಗಿ:ಜೇವರ್ಗಿ ಮುಖ್ಯರಸ್ತೆ ಬಳಿ ಇರುವ ಎನ್​ಜಿಓ ಕಾಲೋನಿಯಲ್ಲಿ ನಿರ್ಮಿಸಲಾದ ರೈಲ್ವೆ ಮೇಲ್ಸೇತುವೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಇಂದಿನಿಂದ ಎರಡು ಬದಿಯ ಸಂಚಾರ ಆರಂಭವಾಗಲಿದೆ.

ಕಳೆದ ವರ್ಷ ರೈಲ್ವೆ ವಿಕಾಸ ನಿಗಮವು ರೈಲ್ವೆ ಮೇಲ್ಸೇತುವೆ ಕಾಮಗಾರಿ ದುರಸ್ತಿ ಕಾರ್ಯವನ್ನು ಕೈಗೆತ್ತಿಕೊಂಡಿತ್ತು. ಆರು ತಿಂಗಳ ಹಿಂದೆ ಪ್ರಾರಂಭವಾದ ಕಾಮಗಾರಿ ವೇಗವಾಗಿ ಪೂರ್ಣಗೊಂಡಿದ್ದು, 8.5 ಮೀಟರ್ ಅಗಲದ ಸೇತುವೆ ನಿರ್ಮಿಸಲಾಗಿದೆ.

ರೈಲ್ವೆ ಮೇಲ್ಸೇತುವೆ ಕಾಮಗಾರಿ ಬಹುತೇಕ ಪೂರ್ಣ

ಇದರ ಪಕ್ಕದಲ್ಲೇ ಇನ್ನೊಂದು ಸೇತುವೆ ಕಾಮಗಾರಿ ಆರಂಭವಾಗಿದ್ದು, ಇಷ್ಟರಲ್ಲೇ ಅದು ಕೂಡ ಪೂರ್ಣಗೊಳಿಸುವ ಯೋಚನೆ ಅಧಿಕಾರಿಗಳದ್ದಾಗಿದೆ. ಇದರ ಕಾಮಗಾರಿ ವೇಗವಾಗಿ ಸಾಗುತ್ತಿದ್ದು, ವಾಹನ ಸಂಚಾರ ಆದಷ್ಟು ಬೇಗ ಸುಗಮಗೊಳ್ಳುತ್ತದೆ ಎಂಬ ನಿರೀಕ್ಷೆ ಇಲ್ಲಿನ ಜನರದ್ದಾಗಿದೆ‌.

For All Latest Updates

TAGGED:

Kalburgi

ABOUT THE AUTHOR

...view details