ಕಲಬುರಗಿ: ಚಾಕುವಿನಿಂದ ಇರಿದು ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಕಲಬುರಗಿ ನಗರದ ಪಿಎನ್ಟಿ ಕ್ವಾಟರ್ಸ್ ಬಳಿ ತಡರಾತ್ರಿ ನಡೆದಿದೆ. ಪಿಎನ್ಟಿ ಕ್ವಾಟರ್ಸ್ ನಿವಾಸಿ ಪ್ರೀತಂ ಬನ್ನಿಕಟ್ಟಿ ಕೊಲೆಯಾದ ದುರ್ದೈವಿ. ಪ್ರೀತಂ ಕೆಲ ತಿಂಗಳ ಹಿಂದಷ್ಟೇ ಅನ್ಯ ಧರ್ಮದ ಯುವತಿಯನ್ನು ಪ್ರೀತಿಸಿ ವಿವಾಹವಾಗಿದ್ದ ಎನ್ನಲಾಗಿದೆ. ಈ ಹಿನ್ನೆಲೆ ಕೊಲೆ ಮಾಡಿದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಅನ್ಯಧರ್ಮದ ಯುವತಿಯೊಂದಿಗೆ ವಿವಾಹ: ಚಾಕುವಿನಿಂದ ಇರಿದು ವ್ಯಕ್ತಿಯ ಬರ್ಬರ ಹತ್ಯೆ - ಕಲಬುರಗಿ ಯುವಕನ ಕೊಲೆ ಸುದ್ದಿ
ಅನ್ಯಧರ್ಮದ ಯುವತಿಯೊಂದಿಗೆ ಮದುವೆಯಾಗಿದ್ದಕ್ಕೆ ಚಾಕುವಿನಿಂದ ಇರಿದು ವ್ಯಕ್ತಿಯೊಬ್ಬರನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಕಲಬುರಗಿ ನಗರದ ಪಿಎನ್ಟಿ ಕ್ವಾಟರ್ಸ್ ಬಳಿ ತಡರಾತ್ರಿ ನಡೆದಿದೆ.
ವ್ಯಕ್ತಿಯ ಬರ್ಬರ ಹತ್ಯೆ
ಕಳೆದ ರಾತ್ರಿ ಪ್ರೀತಂನನ್ನು ಕೆಲ ದುಷ್ಕರ್ಮಿಗಳು ಫಾಲೋ ಮಾಡಿಕೊಂಡು ಬಂದು ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಈ ಕುರಿತು ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಇದನ್ನೂ ಓದಿ:ರಾಜ್ಯದಲ್ಲಿ ಅತಿ ಹೆಚ್ಚು ಬಜೆಟ್ ಮಂಡನೆ ಮಾಡಿದ ಟಾಪ್ 5 ಹಣಕಾಸು ಸಚಿವರು/ಸಿಎಂಗಳು ಯಾರು?