ಕಲಬುರಗಿ: ವಿನಾಕಾರಣ ನನ್ನ ಹಾಗೂ ನನ್ನ ಹೆಂಡತಿ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿ ಮರ್ಯಾದೆ ಹರಾಜು ಮಾಡಿದ್ದಾರೆ ಎಂದು ಡೆತ್‌ನೋಟ್ ಬರೆದಿಟ್ಟು ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಶಹಬಾದ ತಾಲೂಕಿನ ಮರತೂರ ಗ್ರಾಮದಲ್ಲಿ ನಡೆದಿದೆ.
ಮಂಜುನಾಥ ಅಲಿಯಾಸ್ ಮನೋಜ್ ಸಿಂದೆ (32) ಎಂಬುವರು ಮನೆಯಲ್ಲೇ ನೇಣಿಗೆ ಶರಣಾದ ವ್ಯಕ್ತಿ. ಸಾಯಬಣ್ಣಾ ಜೋಗುರ, ಶರಣಮ್ಮ ನಾಟೀಕರ್, ಪ್ರತಿಭಾ ನಾಗೇಶ ಹಾಗೂ ಪ್ರತಿಭಾಳ ತಾಯಿಯ ಹೆಸರನ್ನ ಡೆತ್ನೋಟ್ನಲ್ಲಿ ಉಲ್ಲೇಖಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮನೋಜ್‌ನ ಪತ್ನಿಯ ಅಣ್ಣ ಮತ್ತು ಆತನ ಹೆಂಡತಿ ನಡುವೆ ಕೌಟುಂಬಿಕ ಕಲಹ ನಡೆದಿದೆ ಎನ್ನಲಾಗಿದೆ. ಈ ನಡುವೆ ಅಣ್ಣನ ಮಗು ಕಾಣೆಯಾಗಿದೆ. ಮಗು ಕಾಣೆಯಾಗಲು ನೀವೇ ಕಾರಣ ಅಂತಾ ಆರೋಪಿಸಿ ಮನೋಜ್ ಹಾಗೂ ಆತನ ಪತ್ನಿ ಹೆಸರಿನಲ್ಲಿ ಠಾಣೆಗೆ ದೂರು ನೀಡಿದ್ದಾರೆ.