ಕರ್ನಾಟಕ

karnataka

ETV Bharat / city

ರಾಷ್ಟ್ರ ರಾಜಕಾರಣದಲ್ಲಿ ಬಿಜೆಪಿ ಪಕ್ಷ ವಿವಿಧ ಪಕ್ಷಗಳಿಗಿಂತ ವಿಭಿನ್ನ: ರಘುನಾಥ್ ಮಲ್ಕಾಪುರೆ - Kalburgi

ಬೇರೆ ಪಕ್ಷಗಳಿಗೆ ಹೋಲಿಸಿದರೆ ಬಿಜೆಪಿ ಪಕ್ಷ ಎಲ್ಲ ಪಕ್ಷಗಳಿಗಿಂತ ಸ್ವಲ್ಪ ಭಿನ್ನವಾಗಿದೆ. ಕಾರಣ ಇಲ್ಲಿ ಆಂತರಿಕ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ಹಾದಿಯಲ್ಲಿ ವ್ಯವಸ್ಥಿತವಾದ ಸಂಘಟನಾ ವ್ಯವಸ್ಥೆಯನ್ನು ಹೊಂದಿದೆ ಎಂದು ರಘುನಾಥ್ ಮಲ್ಕಾಪುರೆ ತಿಳಿಸಿದ್ದಾರೆ.

ರಘುನಾಥ್ ಮಲ್ಕಾಪುರೆ

By

Published : Jun 30, 2019, 3:36 AM IST

ಕಲಬುರಗಿ: ಬಿಜೆಪಿ ಪಕ್ಷ ರಾಷ್ಟ್ರ ಮತ್ತು ರಾಜ್ಯ ರಾಜಕಾರಣದಲ್ಲಿ ವಿವಿಧ ರಾಜಕೀಯ ಪಕ್ಷಗಳಿಗಿಂತ ವಿಭಿನ್ನವಾಗಿದೆ‌ ಎಂದು ಬಿಜೆಪಿಯ ಸಂಘಟನಾ ಪ್ರಭಾರಿ ರಘುನಾಥ್ ಮಲ್ಕಾಪುರೆ ಅಭಿಪ್ರಾಯಪಟ್ಟರು.

ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಸಂಘಟನಾ ಸದಸ್ಯತ್ವ ಅಭಿಯಾನ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬೇರೆ ಪಕ್ಷಗಳಿಗೆ ಹೋಲಿಸಿದರೆ ಬಿಜೆಪಿ ಪಕ್ಷ ಎಲ್ಲ ಪಕ್ಷಗಳಿಗಿಂತ ಸ್ವಲ್ಪ ಭಿನ್ನವಾಗಿದೆ. ಕಾರಣ ಇಲ್ಲಿ ಆಂತರಿಕ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ಹಾದಿಯಲ್ಲಿ ವ್ಯವಸ್ಥಿತವಾದ ಸಂಘಟನಾ ವ್ಯವಸ್ಥೆಯನ್ನು ಹೊಂದಿದೆ. ಸಾಮಾನ್ಯರಿಂದ ಅತಿ ಸಾಮಾನ್ಯ ಕಾರ್ಯಕರ್ತರಿಗೂ ಸಹ ರಾಷ್ಟ್ರ ರಾಜಕಾರಣದಲ್ಲಿ ಪ್ರಧಾನಿ ಮತ್ತು ರಾಷ್ಟ್ರಪತಿಗಳನ್ನಾಗಿಸುವ ಅವಕಾಶ ಭಾರತೀಯ ಜನತಾ ಪಕ್ಷ ಮಾಡಿಕೊಟ್ಟಿದೆ. ಇದಕ್ಕೆ ಬಿಜೆಪಿ ಪಕ್ಷದ ನಿಷ್ಠಾವಂತ ಹಾಗೂ ಸಾಮಾನ್ಯ ಕಾರ್ಯಕರ್ತರಾಗಿದ್ದ ಮೋದಿಯವರು ದೇಶದ ಪ್ರಧಾನಿಯಾಗಿದ್ದು, ಹಾಗೂ ರಾಮನಾಥ್ ಕೋವಿಂದ್ ರಾಷ್ಟ್ರಪತಿಗಳಾಗಿರುವುದು ತಾಜಾ ಉದಾರಣೆಯಾಗಿದೆ ಎಂದರು.

ಈ ಸಂದರ್ಭದಲ್ಲಿ ಸಂಸದ ಉಮೇಶ್ ಜಾಧವ್, ಜಿಲ್ಲಾಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ್, ಶಾಸಕ ಬಸವರಾಜ ಮತ್ತಿಮೂಡ್, ಸಂಘಟನಾ ಕಾರ್ಯದರ್ಶಿಗಳಾದ ಅರುಣಕುಮಾರ್, ಶಶೀಲ್ ನಮೋಶಿ, ಜಿಪಂ ಅಧ್ಯಕ್ಷ ಸುವರ್ಣ ಮಲಾಜಿ, ರವಿ ಬಿರಾದರ್, ರಾಜು ನಿಲಂಗಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

For All Latest Updates

TAGGED:

Kalburgi

ABOUT THE AUTHOR

...view details