ಕರ್ನಾಟಕ

karnataka

ETV Bharat / city

10 ರೂ. ಡಾಕ್ಟರ್ ಖ್ಯಾತಿಯ ಡಾ.ಮಲ್ಲೆ ಅವರಿಗೆ ಸಂಸದರಿಂದ ಸನ್ಮಾನ - ಈಟಿವಿ ಭಾರತ್​ ಕನ್ನಡ

ಪ್ರಧಾನಿ ನರೇಂದ್ರ ಮೋದಿ ಅವರಿಂದ ಮೆಚ್ಚುಗೆ ಮತ್ತು ಅಭಿನಂದನಾ ಪತ್ರ ಸ್ವೀಕರಿಸಿದ್ದ ಡಾಕ್ಟರ್ ಮಲ್ಲಾರಾವ್ ಮಲ್ಲೆ ಅವರಿಗೆ ಸಂಸದ ಉಮೇಶ್ ಜಾಧವ್ ಸನ್ಮಾನಿಸಿದರು.

Ten Rupees Doctor Dr. Malle Letter from Prime Minister
ಹತ್ತು ರೂಪಾಯಿ ಡಾಕ್ಟರ್ ಡಾ.ಮಲ್ಲೆ ಅವರಿಗೆ ಪ್ರಧಾನಿಯಿಂದ ಪತ್ರ

By

Published : Jul 31, 2022, 9:45 PM IST

ಕಲಬುರಗಿ: ಕೋವಿಡ್ ವೇಳೆ 2 ಲಕ್ಷಕ್ಕೂ ಅಧಿಕ ಜನರಿಗೆ ವ್ಯಾಕ್ಸಿನ್ ನೀಡಿದ ಡಾಕ್ಟರ್ ಮಲ್ಲಾರಾವ್ ಮಲ್ಲೆ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ಮತ್ತು ಅಭಿನಂದನಾ ಪತ್ರ ಬರೆದು ಶುಭಕೋರಿದ್ದರು. ಈ ಬೆನ್ನಲ್ಲೇ ಕಲಬುರಗಿ ಸಂಸದ ಡಾ.ಉಮೇಶ್ ಜಾಧವ್ ಅವರು ಇಂದು ಆಸ್ಪತ್ರೆಗೆ ತೆರಳಿ ಡಾಕ್ಟರ್ ಮಲ್ಲಾರಾವ್ ಮಲ್ಲೆ ಅವರಿಗೆ ಸನ್ಮಾನಿಸಿ ಗೌರವಿಸಿದರು.

ಕಲಬುರಗಿಯ ಹೆಮ್ಮೆಯ 10 ರೂಪಾಯಿ ಡಾಕ್ಟರ್ ಸಾಬ್ ಅಂತಲೇ ಪ್ರಸಿದ್ಧಿ ಪಡೆದ ಡಾ. ಮಲ್ಲಾರಾವ್ ಮಲ್ಲೆ ಅವರು ತಮ್ಮ ಇಳಿ ವಯಸ್ಸಿನಲ್ಲಿಯು ಕೋವಿಡ್ ಸಂದರ್ಭದಲ್ಲಿ 2 ಲಕ್ಷಕ್ಕೂ ಹೆಚ್ಚಿಗೆ ಜನರಿಗೆ ವ್ಯಾಕ್ಸಿನ್ ನೀಡಿ ಜನ ಸೇವೆ ಮಾಡಿದ್ದರು. ಇದನ್ನು ಸ್ವತಃ ಪ್ರಧಾನಿ ನರೇಂದ್ರ ಮೋದಿ ಗುರುತಿಸಿ ಡಾ.ಮಲ್ಲೆ ಅವರಿಗೆ ಮೆಚ್ಚುಗೆ ಮತ್ತು ಅಭಿನಂದನಾ ಪತ್ರ ಬರೆದು ಶುಭಕೋರಿದ್ದಾರೆ.

ಈ ಹಿನ್ನೆಲೆ ಕಲಬುರಗಿ ಸಂಸದ ಡಾ.ಉಮೇಶ ಜಾಧವ ಅವರು ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರಿಗೆ ಸನ್ಮಾನಿಸಿ ಶುಭಕೋರಿದರು. ಈ ಸಂದರ್ಭದಲ್ಲಿ ಬಿಜೆಪಿ ಯುವ ಮುಖಂಡ ರೇವಣಸಿದ್ದ ಬಡಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಇದನ್ನೂ ಓದಿ :ಕಲಬುರಗಿಯ 10 ರೂ. ಡಾಕ್ಟರ್​... ಮಲ್ಲಾರಾವ​ ಮಲ್ಲೆ ಸೇವೆಗೆ ಪ್ರಧಾನಿ ಮೋದಿ ಶ್ಲಾಘನೆ..!

ABOUT THE AUTHOR

...view details