ಸೇಡಂ: ಬೀದಿ ಬದಿಯಲ್ಲೇ ಬುಟ್ಟಿ ವ್ಯಾಪಾರ ಮಾಡಿಕೊಂಡು ಜೀವನ ಕಟ್ಟಿಕೊಂಡಿದ್ದ ಕುಟುಂಬಕ್ಕೆ ನೆರವಾಗುವ ಮೂಲಕ ಸಹಾಯಕ ಆಯುಕ್ತ ರಮೇಶ ಕೋಲಾರ ಮತ್ತು ತಹಶೀಲ್ದಾರ್ ಬಸವರಾಜ ಬೆಣ್ಣೆಶಿರೂರ ಮಾನವೀಯತೆ ಮೆರೆದಿದ್ದಾರೆ.
ಸೂರಿಲ್ಲದೆ ಬೀದಿ ಪಾಲಾಗುತ್ತಿದ್ದ ಕುಟುಂಬಕ್ಕೆ ಆಶ್ರಯ ಕಲ್ಪಿಸಿದ ಎಸಿ, ತಹಶೀಲ್ದಾರ್ - ಸೇಡಂನಲ್ಲಿ ಮಳಿಗೆ ತೆರವುಗೊಳಿಸಿದ ಪುರಸಭೆ
ಸೂರಿಲ್ಲದೆ ಬೀದಿ ಪಾಲಾಗುತ್ತಿದ್ದ ಕುಟುಂಬಕ್ಕೆ ನೆರವಾಗುವ ಮೂಲಕ ಸಹಾಯಕ ಆಯುಕ್ತ ರಮೇಶ ಕೋಲಾರ ಮತ್ತು ತಹಶೀಲ್ದಾರ್ ಬಸವರಾಜ ಬೆಣ್ಣೆಶಿರೂರ ಮಾನವೀಯತೆ ಮೆರೆದಿದ್ದಾರೆ.
ಹತ್ತಾರು ವರ್ಷಗಳಿಂದ ಪುರಸಭೆ ಸ್ಥಳದಲ್ಲಿ ಪುಟ್ಟ ಗುಡಿಸಲೊಂದನ್ನು ಕಟ್ಟಿಕೊಂಡು ಮಹಿಳೆಯೊಬ್ಬರು ಬುಟ್ಟಿ ವ್ಯಾಪಾರ ಮಾಡಿಕೊಂಡಿದ್ದರು. ಆದರೆ, ಬುಧವಾರ ಪುರಸಭೆ ಜಾಗದ ಅಂಗಡಿಗಳನ್ನು ತೆರವುಗೊಳಿಸಲು ಅಧಿಕಾರಿಗಳು ಮುಂದಾಗಿದ್ದರು. ಇದರಿಂದ ಕಂಗಾಲಾಗಿದ್ದ ಕುಟುಂಬದವರು ಕಣ್ಣೀರಿಡುತ್ತಾ ಸಹಾಯ ಮಾಡುವಂತೆ ಕಂಡ ಕಂಡವರ ಅಂಗಲಾಚುತ್ತಿದ್ದರು.
ವಿಷಯ ತಿಳಿದ ಸಹಾಯಕ ಆಯುಕ್ತ ಮತ್ತು ತಹಶೀಲ್ದಾರ್ ಸ್ಥಳಕ್ಕೆ ಭೇಟಿ ಕೊಟ್ಟು ಕುಟುಂಬದ ನೆರವಿಗೆ ನಿಂತಿದ್ದಾರೆ. ಆಶ್ರಯ ಯೋಜನೆಯ ಮನೆಯಲ್ಲಿ ಇರಲು ಅವಕಾಶ ಕಲ್ಪಿಸಿಕೊಟ್ಟು ಮಾನವೀಯತೆ ಮೆರೆದಿದ್ದಾರೆ. ಅಲ್ಲದೆ, ಪುರಸಭೆಯ ವಾಹನದಲ್ಲೇ ನಿರಾಶ್ರಿತ ಕುಟುಂಬದ ಸಾಮಾನುಗಳನ್ನು ಸಾಗಿಸಲು ಮುಖ್ಯಾಧಿಕಾರಿ ಸತೀಶ್ ಗುಡ್ಡೆ ಸೂಚಿಸಿದ್ದಾರೆ.