ಕರ್ನಾಟಕ

karnataka

ETV Bharat / city

ಮೆದುಳು ನಿಷ್ಕ್ರೀಯಗೊಂಡ ಮಹಿಳೆಯೊಬ್ಬರ ಕಿಡ್ನಿ ಕಸಿ ಯಶಸ್ವಿ: ಕುಟುಂಬದ ಸದಸ್ಯರಿಗೆ ನಾಳೆ ಸನ್ಮಾನ - Brain dysfunction in a road accident

ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಮೆದುಳು ನಿಷ್ಕ್ರೀಯಗೊಂಡ ಮಹಿಳೆಯೊಬ್ಬರ ಮೂತ್ರಪಿಂಡ (ಕಿಡ್ನಿ) ಕಸಿ ಮಾಡುವಲ್ಲಿ ನಗರದ ಚಿರಾಯು ಆಸ್ಪತ್ರೆ ವೈದ್ಯರು ಯಶಸ್ವಿಯಾಗಿದ್ದಾರೆ.

successful
ಮೆದುಳು ನಿಷ್ಕ್ರಿಯಗೊಂಡ

By

Published : Jan 25, 2020, 1:27 PM IST

ಕಲಬುರಗಿ:ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಮೆದುಳು ನಿಷ್ಕ್ರೀಯಗೊಂಡ ಮಹಿಳೆಯೊಬ್ಬರ ಮೂತ್ರಪಿಂಡ (ಕಿಡ್ನಿ) ಕಸಿ ಮಾಡುವಲ್ಲಿ ನಗರದ ಚಿರಾಯು ಆಸ್ಪತ್ರೆ ವೈದ್ಯರು ಯಶಸ್ವಿಯಾಗಿದ್ದಾರೆ. ಇದು ಆಸ್ಪ್ರತ್ರೆ ವೈದ್ಯರು ಮಾಡಿದ 2ನೇ ಯಶಸ್ವಿ ಕಸಿಯಾಗಿದೆ.

2018ರ ನವೆಂಬರ್​ 8 ರಂದು ಶಿವಮ್ಮ ರಸ್ತೆ ಅಪಘಾತದಲ್ಲಿ ತಲೆಗೆ ಗಂಭೀರ ಸ್ವರೂಪದ ಗಾಯವಾಗಿದ್ದು ತೀವ್ರ ರಕ್ತಸ್ರಾವದಿಂದ ಮೆದುಳು ನಿಷ್ಕ್ರೀಯಗೊಂಡಿತ್ತು.

ಮೆದುಳು ನಿಷ್ಕ್ರೀಯಗೊಂಡ ಮಹಿಳೆ

ಆಗ ಜೀವನ ಸಾರ್ಥಕ ತಂಡದ ನೋಡಲ್ ಅಧಿಕಾರಿ ಡಾ.‌ಅಂಬರಾಯ್ ರುದ್ರವಾಡಿ ಹಾಗೂ ಸಿಬ್ಬಂದಿ ಮಹಿಳೆಯ ಕುಟುಂಬದೊಂದಿಗೆ ಸಮಾಲೋಚಿಸಿ ಕುಟುಂಬದ ಸದಸ್ಯರಿಂದ ಅಂಗಾಂಗ ದಾನಕ್ಕೆ ಒಪ್ಪಿಗೆ ಪಡೆದುಕೊಂಡಿದ್ದರು.

ಈ ಬಗ್ಗೆ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ನಂತರ ಡಯಾಲಿಸಿಸ್​ನಿಂದ ಬಳಲುತ್ತಿದ್ದ ರೋಗಿಗಳಿಬ್ಬರಿಗೆ ಆ ಕಿಡ್ನಿಗಳನ್ನು ಕಸಿ ಮಾಡಲಾಗಿದೆ. ಅಂಗಾಂಗ ದಾನಕ್ಕೆ ಒಪ್ಪಿಗೆ ನೀಡಿದ ಶಿವಮ್ಮ ಅವರ ಕುಟುಂಬದ ಸದಸ್ಯರ ಒಳ್ಳೆಯ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಜನವರಿ 26 ರಂದು ಜಿಲ್ಲಾಡಳಿತದಿಂದ ಶಿವಮ್ಮ ಕುಟುಂಬಸ್ಥರಿಗೆ ಸನ್ಮಾನ ಹಮ್ಮಿಕೊಳ್ಳಲಾಗಿದೆ.

ABOUT THE AUTHOR

...view details