ಕರ್ನಾಟಕ

karnataka

ETV Bharat / city

ಬಿಜೆಪಿ ಜಾತಿ ರಾಜಕಾರಣ ಮಾಡುತ್ತಿರುವುದರಿಂದ ಕಾಂಗ್ರೆಸ್​​​ ಸೇರಿದ್ದೇನೆ: ಸುಭಾಷ್​​​ ರಾಠೋಡ್​​​ - Kalburgi

ಚಿಂಚೋಳಿಯಲ್ಲಿ ನಡೆದ ಕಾಂಗ್ರೆಸ್ ಸಭೆಯಲ್ಲಿ ಬಂಜಾರ ಸಮುದಾಯದ ಪ್ರಭಾವಿ ನಾಯಕ ಸುಭಾಷ್ ರಾಠೋಡ್ ಅಧಿಕೃತವಾಗಿ ಬಿಜೆಪಿ ತೊರೆದು ಕಾಂಗ್ರೆಸ್​ಗೆ ಸೇರ್ಪಡೆಯಾದರು.

ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ಸುಭಾಷ್ ರಾಠೋಡ್

By

Published : Mar 29, 2019, 7:30 PM IST

ಕಲಬುರಗಿ: ಜಾತಿ ಆಧಾರದ ಮೇಲೆ ವ್ಯಕ್ತಿಯನ್ನು ಮುಗಿಸಲು ಬಿಜೆಪಿ ಹೊರಟಿತ್ತು. ಅದರ ವಿರುದ್ಧ ಸಿಡಿದ್ದೆದ್ದು ಇಂದು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದೇನೆ ಎಂದು ಬಂಜಾರ ಸಮುದಾಯದ ಪ್ರಭಾವಿ ನಾಯಕ ಸುಭಾಷ್ ರಾಠೋಡ್ ಹೇಳಿದ್ದಾರೆ.

ಚಿಂಚೋಳಿಯಲ್ಲಿ ನಡೆದ ಕಾಂಗ್ರೆಸ್ ಸಭೆಯಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಸಮ್ಮುಖದಲ್ಲಿ ಅಧಿಕೃತವಾಗಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ಸುಭಾಷ್ ರಾಠೋಡ್, ಮಲ್ಲಿಕಾರ್ಜುನ ಖರ್ಗೆ ಹೈದರಾಬಾದ್ ಕರ್ನಾಟಕದ ದಿಟ್ಟ ನಾಯಕ. ಸಂಸತ್​ನಲ್ಲಿ ಮೋದಿಯ ಪೊಳ್ಳುತನವನ್ನು ದೇಶದ ಮುಂದೆ ಬಯಲು ಮಾಡಿದ್ದಾರೆ. ಅಂತಹ ನಾಯಕರನ್ನು ಸೋಲಿಸಲು ಬಿಜೆಪಿ ಜಾತಿ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದರು.

ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ಸುಭಾಷ್ ರಾಠೋಡ್

ಇದೇ ವೇಳೆ ಕಾಂಗ್ರೆಸ್ ಶಾಸಕ ಸ್ಥಾನ ತೊರೆದು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದ ಉಮೇಶ್ ಜಾಧವ್ ವಿರುದ್ಧ ವಾಗ್ದಾಳಿ ನಡೆಸಿದ ರಾಠೋಡ್, ಜಾಧವ್​ರಿಂದ ಬಂಜಾರ ಸಮುದಾಯದ ದುರ್ಬಳಕೆಯಾಗುತ್ತಿದೆ. ಬಂಜಾರ ಸಮುದಾಯದ ಧರ್ಮಗುರು ರಾಮರಾವ್ ಮಹಾರಾಜರನ್ನು ಜಾಧವ್​ ದುರ್ಬಳಕೆ ಮಾಡಿಕೊಂಡಿದ್ದಾರೆ. ಈಗ ಲೋಕಸಭೆಗೆ ಸ್ಪರ್ಧಿಸುತ್ತಿದ್ದಾರೆ. ಅಂತವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಸುಭಾಷ್ ರಾಠೋಡ್ ಕರೆ ನೀಡಿದರು.


For All Latest Updates

TAGGED:

Kalburgi

ABOUT THE AUTHOR

...view details