ಕರ್ನಾಟಕ

karnataka

ETV Bharat / city

ಹೈಕೋರ್ಟ್ ಆದೇಶ ಮೀರಿ ಹಿಜಾಬ್ ಧರಿಸಿ ಕ್ಲಾಸ್​ಗೆ ಎಂಟ್ರಿ: ಎಚ್ಚೆತ್ತು ಹಿಜಾಬ್ ತೆಗೆಸಿದ ಶಿಕ್ಷಕರು - ಹಿಜಾಬ್ ತೆಗೆಸಿದ ಶಿಕ್ಷಕರು

ಕಲಬುರಗಿಯ ಹಳೆ ಜೇವರ್ಗಿ ರಸ್ತೆಯಲ್ಲಿರುವ ಉರ್ದು ಪ್ರೌಢಶಾಲೆಯಲ್ಲಿ ಹತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಿಜಾಬ್ ಧರಿಸಿ ಆಗಮಿಸಿ, ಶಾಲಾ ಕೊಠಡಿಯಲ್ಲಿ ಕುಳಿತಿದ್ದರು. ಮಾಧ್ಯಮದವರು ಆಗಮಿಸುತ್ತಿದ್ದಂತೆ ಎಚ್ಚೆತ್ತ ಶಿಕ್ಷಕರು, ತಕ್ಷಣ ಕ್ಲಾಸ್ ರೂಮ್​ಗೆ ಆಗಮಿಸಿ ಹಿಜಾಬ್ ತೆಗೆಸಿದ್ದಾರೆ.

klb
klb

By

Published : Feb 14, 2022, 11:23 AM IST

Updated : Feb 21, 2022, 2:02 PM IST

ಕಲಬುರಗಿ: ಹೈಕೋರ್ಟ್ ಮಧ್ಯಂತರ ಆದೇಶ ಉಲ್ಲಂಘಿಸಿ ಹಿಜಾಬ್ ಧರಿಸಿಯೇ ಶಾಲೆಗೆ ವಿದ್ಯಾರ್ಥಿನಿಯರು ಆಗಮಿಸಿದ ಘಟನೆ‌ ನಗರದ ಉರ್ದು ಶಾಲೆಯಲ್ಲಿ ನಡೆದಿದೆ.

ಹಳೆ ಜೇವರ್ಗಿ ರಸ್ತೆಯಲ್ಲಿರೋ ಉರ್ದು ಪ್ರೌಢಶಾಲೆಯಲ್ಲಿ 10ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಿಜಾಬ್ ಧರಿಸಿ ಆಗಮಿಸಿ, ಶಾಲಾ ಕೊಠಡಿಯಲ್ಲಿ ಕುಳಿತಿದ್ದರು. ಮಾಧ್ಯಮದವರು ಆಗಮಿಸುತ್ತಿದ್ದಂತೆ ಎಚ್ಚೆತ್ತ ಶಿಕ್ಷಕರು, ತಕ್ಷಣ ಕ್ಲಾಸ್ ರೂಮ್​ಗೆ ಆಗಮಿಸಿ ಹಿಜಾಬ್ ತೆಗೆಯುವಂತೆ ಸೂಚನೆ ನೀಡಿದ್ದಾರೆ. ಶಿಕ್ಷಕರ ಸೂಚನೆ ಮೇರೆಗೆ ಹಿಜಾಬ್ ತೆಗೆದು ವಿದ್ಯಾರ್ಥಿನಿಯರು ಎಕ್ಸಾಂ ಬರೆಯುತ್ತಿದ್ದಾರೆ.

ಶಾಲೆಯ ಶಿಕ್ಷಕ ಶಿವಾನಂದ

'ವಿದ್ಯಾರ್ಥಿನಿಯರು ಹಳ್ಳಿಗಳಿಂದ ಬಂದಿದ್ದು, ಅವರಿಗೆ ಹೈಕೋರ್ಟ್ ಆದೇಶದ ಮಾಹಿತಿ ಇಲ್ಲದ ಕಾರಣ ಕ್ಲಾಸ್ ರೂಮ್​ಲ್ಲಿ ಹಿಜಾಬ್ ಧರಿಸಿಯೇ ಕುಳಿತಿದ್ದಾರೆ. ಈ ವಿಷಯ ಶಿಕ್ಷಕರ ಗಮನಕ್ಕೆ ಬರುತ್ತಿದಂತೆ ಹಿಜಾಬ್ ತೆಗೆಸಲಾಗಿದೆ. ಹೈಕೋರ್ಟ್ ಆದೇಶ ಉಲ್ಲಂಘನೆ ಆಗಿಲ್ಲ' ಅಂತಾ ಶಾಲೆಯ ಶಿಕ್ಷಕ ಶಿವಾನಂದ ತಿಳಿಸಿದ್ದಾರೆ.

Last Updated : Feb 21, 2022, 2:02 PM IST

ABOUT THE AUTHOR

...view details