ಕಲಬುರಗಿ :ಇಲ್ಲಿನಪ್ರಾರ್ಥನಾ ಮಂದಿರದಲ್ಲಿರುವ ಶಿವಲಿಂಗ ಪೂಜೆಗೆ ಸಂಬಂಧಿಸಿದಂತೆ ಆಳಂದ ನಗರದಲ್ಲಿ ಎರಡು ಗುಂಪುಗಳ ಮಧ್ಯೆ ಭಾರಿ ಗಲಾಟೆಯಾಗಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಅಲ್ಲದೇ ಸಂಸದ, ಶಾಸಕರು, ಪೊಲೀಸ್, ಮಾಧ್ಯಮದವರ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ.
ಬೀದರ್ ಲೋಕಸಭಾ ಸದಸ್ಯ ಭಗವಂತ ಖೂಬಾ, ಶಾಸಕ ಬಸವರಾಜ ಮತ್ತಿಮೂಡ, ರಾಜಕುಮಾರ ಪಾಟೀಲ್ ತೆಲ್ಕೂರ ಮತ್ತು ಸುದ್ದಿ ಮಾಧ್ಯಮದವರ ವಾಹನಗಳು ಸೇರಿದಂತೆ ಕಂಡ ಕಂಡ ವಾಹನಗಳನ್ನು ಕಲ್ಲು ತೂರಿ ಜಖಂ ಮಾಡಲಾಗಿದೆ.
ಆಳಂದ ಪಟ್ಟಣದಲ್ಲಿ ಪರಿಸ್ಥಿತಿ ಕೈಮೀರಿದ್ದು, ಪೊಲೀಸರು ಲಾಠಿ ಪ್ರಹಾರ ನಡೆಸಿದ್ದರು. ಈ ವೇಳೆ ಒಂದು ಗುಂಪಿನ ಉದ್ರಿಕ್ತರು ಪೊಲೀಸರ ಮೇಲೆಯೇ ಕಲ್ಲು ತೂರಾಡಿದ್ದಾರೆ. ಇದರಿಂದ ಹಲವರಿಗೆ ಕಲ್ಲೇಟಿನಿಂದ ಗಾಯವಾಗಿದೆ.