ಕಲಬುರಗಿ:ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುತ್ತಿರುವವಿದ್ಯಾರ್ಥಿಗಳಿಗೆ ನಕಲಿಸಲು ಉತ್ತರದ ಚೀಟಿಗಳನ್ನು ಯುವಕನೊಬ್ಬ ಶಾಲಾ ಕಾಂಪೌಂಡ್ ಹಾರಿ ನೀಡಲು ಯತ್ನಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಘಟನೆ ನಗರದ ಪಿಡಬ್ಲ್ಯೂಡಿ ಕ್ವಾಟ್ರಸ್ ಬಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದಿದೆ.
ನಕಲು ಮಾಡಲು ಪರೀಕ್ಷಾರ್ಥಿಗಳಿಗೆ ಗೋಡೆ ಹಾರಿ ಚೀಟಿ ರವಾನೆ! ವಿಡಿಯೋ
ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ನಕಲು ಮಾಡಲು ಅನುವಾಗುವಂತೆ ವ್ಯಕ್ತಿಯೊಬ್ಬ ಉತ್ತರದ ಚೀಟಿಯೊಂದನ್ನು ಗೋಡೆ ಹಾರಿ ನೀಡಲೆತ್ನಿಸಿದ ವಿಡಿಯೋ ದೊರೆತಿದೆ.
ಕಾಂಪೌಂಡ್ ಹಾರುತ್ತಿರುವ ಯುವಕ
ಪರೀಕ್ಷಾ ಕೇಂದ್ರದ ಸುತ್ತಮುತ್ತ 200 ಮೀಟರ್ ಅಂತರದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದೆ. ಇದನ್ನು ಲೆಕ್ಕಿಸದೆ ಪರೀಕ್ಷಾ ಕೇಂದ್ರದ ಕಾಂಪೌಂಡ್ ಹಾರಿ ಬಂದು ಉತ್ತರದ ಚೀಟಿಗಳನ್ನು ಪರೀಕ್ಷಾರ್ಥಿಗಳಿಗೆ ಕೊಡುವ ಪ್ರಯತ್ನ ನಡೆದಿದೆ.
ಈ ಸಂದರ್ಭದಲ್ಲಿ ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸರು ಪರೀಕ್ಷಾ ಕೇಂದ್ರದ ಮುಂಭಾಗದಲ್ಲಿದ್ದರು. ಕೇಂದ್ರದ ಹಿಂಭಾಗ ಪೊಲೀಸರು ಪರಿಶೀಲನೆ ನಡೆಸುತ್ತಿರಲಿಲ್ಲ ಎಂಬ ಮಾಹಿತಿ ದೊರೆತಿದೆ.