ಕರ್ನಾಟಕ

karnataka

ETV Bharat / city

ಕಲಬುರಗಿಯಲ್ಲಿ ಅದ್ಧೂರಿ ಶ್ರೀರಾಮ ಶೋಭಾಯಾತ್ರೆ: ಹಿಂದೂಗಳಿಗೆ ಜ್ಯೂಸ್ ನೀಡಿದ ಮುಸ್ಲಿಂ ಬಾಂಧವರು

ವಾರ್ಡ್​ ನಂ. 10ರ ಮಾಜಿ ಕಾರ್ಪೊರೇಟರ್ ಅಬ್ದುಲ್ ರಹೀಂ ನೇತೃತ್ವದಲ್ಲಿ ತಂಪು ಪಾನೀಯ ವ್ಯವಸ್ಥೆ ಮಾಡಲಾಗಿತ್ತು. ಕಳೆದ ನಾಲ್ಕೈದು ವರ್ಷಗಳಿಂದ ರಾಮ ನವಮಿಯಂದು ತಂಪು ಪಾನೀಯ ನೀಡುವ ವ್ಯವಸ್ಥೆ ಮಾಡಿಕೊಂಡು ಬರುತ್ತಿರುವ ಮುಸ್ಲಿಂ ಬಾಂಧವರು, ದ್ವೇಷವನ್ನ ಬದಿಗಿಟ್ಟು ಹಿಂದೂ-ಮುಸ್ಲಿಂ ಬಾಯಿ-ಬಾಯಿ ಅನ್ನೋದನ್ನ ಸಾರಿದ್ದಾರೆ..

ಶ್ರೀರಾಮ ಶೋಭಾಯಾತ್ರೆ
ಶ್ರೀರಾಮ ಶೋಭಾಯಾತ್ರೆ

By

Published : Apr 10, 2022, 1:27 PM IST

Updated : Apr 10, 2022, 8:28 PM IST

ಕಲಬುರಗಿ: ನಗರದಲ್ಲಿ ಇಂದು ಶ್ರೀರಾಮನವಮಿ ಉತ್ಸವ ಕಳೆಗಟ್ಟಿತ್ತು. ಸಾವಿರಾರು ಸಂಖ್ಯೆಯಲ್ಲಿ ರಾಮನ ಭಕ್ತರು ಶೋಭಯಾತ್ರೆಯಲ್ಲಿ ಭಾಗವಹಿಸಿದ್ದರು. ವಿಶೇಷವಾಗಿ ರಾಮಭಕ್ತರಿಗೆ ಮುಸ್ಲಿಂ ಬಾಂಧವರು ತಂಪು ಪಾನೀಯ ನೀಡಿದರಲ್ಲದೆ, ಕೋಮುಸೌಹಾರ್ದತೆ ಮೆರೆದರು. ನಗರದೆಲ್ಲಡೆ ಕೇಸರಿ ಧ್ವಜಗಳೇ ರಾರಾಜಿಸುತ್ತಿದ್ದವು.

ಶೋಭಯಾತ್ರೆಯಲ್ಲಿ 15 ಅಡಿ ಎತ್ತರದ ಶ್ರೀರಾಮನ ಉತ್ಸವ ಮೂರ್ತಿಯನ್ನು ರಸ್ತೆಯುದ್ದಕ್ಕೂ ಮೆರವಣಿಗೆ ಮಾಡಲಾಯಿತು. ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷ ಆಂದೋಲ ಮಠದ ಸಿದ್ಧಲಿಂಗ ಸ್ವಾಮೀಜಿ ಸೇರಿದಂತೆ ಸ್ಥಳಿಯ ಶಾಸಕರು ಮಠಾಧೀಶರು ಭಾಗವಹಿಸಿದ್ದರು. ರಾಮನವಮಿ ಉತ್ಸವ ಕಳೆದ ಏಳು ವರ್ಷಗಳಿಂದ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ನಗರದಾದ್ಯಂತ ಬಿಗಿ ಪೋಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.

ಕಲಬುರಗಿಯಲ್ಲಿ ಅದ್ಧೂರಿ ಶ್ರೀರಾಮ ಶೋಭಾಯಾತ್ರೆ

ಮೆರವಣಿಗೆಯಲ್ಲಿ ರಾರಾಜಿಸಿದ ಭಾವಚಿತ್ರಗಳು:ಶೋಬಾಯಾತ್ರೆಯಲ್ಲಿ ರಾಮನಮೂರ್ತಿ ಜೊತೆಗೆ ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​, ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ಸಿಡಿಎಸ್​​ ಬಿಪಿನ್ ರಾವತ್, ಗಾನಕೋಗಿಲೆ ಲತಾ ಮಂಗೇಶ್ಕರ್, ಹಿಂದೂ ಕಾರ್ಯಕರ್ತ ಹರ್ಷ, ಶಿವು ಉಪ್ಪಾರ ಭಾವಚಿತ್ರಗಳು ರಾರಾಜಿಸಿದವು‌.

ಹಿಂದೂಗಳಿಗೆ ಜ್ಯೂಸ್ ನೀಡಿದ ಮುಸ್ಲಿಂ ಬಾಂಧವರು :ರಾಜ್ಯಾದ್ಯಂತ ನಡೆಯುತ್ತಿರುವ ಕೋಮು ಗಲಭೆ ಮಧ್ಯೆ ಕಲಬುರಗಿ ನಗರದಲ್ಲಿ ಹಿಂದೂಗಳಿಗೆ ಜ್ಯೂಸ್ ನೀಡುವ ಮೂಲಕ ಮುಸ್ಲಿಮರು ಸಾಮರಸ್ಯದ ಸಂದೇಶ ಸಾರಿದರು. ಖಾದ್ರಿ ಚೌಕ್ ಬಳಿ ಶೋಭಾಯಾತ್ರೆಯಲ್ಲಿ‌ ಪಾಲ್ಗೊಂಡ ರಾಮನ ಭಕ್ತರಿಗೆ ಮುಸ್ಲಿಂ ಬಾಂಧವರು ತಂಪು ಪಾನೀಯದ ವ್ಯವಸ್ಥೆ ಮಾಡಿದ್ದರು.

ವಾರ್ಡ್​ ನಂ. 10ರ ಮಾಜಿ ಕಾರ್ಪೊರೇಟರ್ ಅಬ್ದುಲ್ ರಹೀಂ ನೇತೃತ್ವದಲ್ಲಿ ತಂಪು ಪಾನೀಯ ವ್ಯವಸ್ಥೆ ಮಾಡಲಾಗಿತ್ತು. ಕಳೆದ ನಾಲ್ಕೈದು ವರ್ಷಗಳಿಂದ ರಾಮ ನವಮಿಯಂದು ತಂಪು ಪಾನೀಯ ನೀಡುವ ವ್ಯವಸ್ಥೆ ಮಾಡಿಕೊಂಡು ಬರುತ್ತಿರುವ ಮುಸ್ಲಿಂ ಬಾಂಧವರು, ದ್ವೇಷವನ್ನ ಬದಿಗಿಟ್ಟು ಹಿಂದೂ-ಮುಸ್ಲಿಂ ಬಾಯಿ-ಬಾಯಿ ಅನ್ನೋದನ್ನ ಸಾರಿದ್ದಾರೆ.

ಇದನ್ನೂ ಓದಿ:ಶ್ರೀರಾಮ ನವಮಿ ವಿಶೇಷ: ಪುರಿ ಬೀಚ್‌ನಲ್ಲಿ ಅರಳಿದ ಅಯೋಧ್ಯೆಯ ಶ್ರೀರಾಮ, ರಾಮಮಂದಿರ

Last Updated : Apr 10, 2022, 8:28 PM IST

ABOUT THE AUTHOR

...view details