ಕಲಬುರಗಿ :ನಿನ್ನೆ ಸಂಸದ ಪ್ರತಾಪ್ ಸಿಂಹ ಕುರಿತು ಸುಲಫಲ ಮಠದ ಮಹಂತಾ ಶಿವಾಚಾರ್ಯ ಶ್ರೀಗಳ ಹೇಳಿಕೆಯನ್ನು ಆಂದೋಲಾ ಮಠದ ಸಿದ್ದಲಿಂಗ ಸ್ವಾಮೀಜಿ ತೀವ್ರವಾಗಿ ಖಂಡಿಸಿದ್ದಾರೆ.
ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ಸಂಸದ ಪ್ರತಾಪ್ ಸಿಂಹ ಹೇಳಿಕೆ ವಿಚಾರಕ್ಕೆ ಸಂಬಧಿಸಿದಂತೆ, "ಪ್ರಿಯಾಂಕ್ ಕುರಿತ ಹೇಳಿಕೆಯ ಬಗ್ಗೆ ಕ್ಷಮೆ ಕೇಳಲು 15 ದಿನಗಳ ಗಡವು ನೀಡ್ತೇವೆ, ಅಷ್ಟರೊಳಗೆ ಕ್ಷಮೆ ಕೇಳದಿದ್ದರೆ ಮೈಸೂರಿನಲ್ಲಿರೋ ಮನೆಗೆ ಬಂದು ಚಡ್ಡಿ ಬಿಚ್ಚಿ ಹೊಡೆಯಬೇಕಾಗುತ್ತೆ" ಎಂದು ಸುಲಫಲ ಮಠದ ಮಹಾಂತ ಶಿವಾಚಾರ್ಯ ಸ್ವಾಮೀಜಿ ನಿನ್ನೆ ಹೇಳಿದ್ದರು.
ನಗರದಲ್ಲಿ ನಿನ್ನೆ ಪ್ರತಾಪ್ ಸಿಂಹ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಸ್ವಾಮೀಜಿಗಳು ಈ ಹೇಳಿಕೆ ನೀಡಿದ್ದರು.
ಮಹಂತಾ ಶಿವಾಚಾರ್ಯ ಶ್ರೀಗಳ ಹೇಳಿಕೆ ಮಹಂತಾ ಶಿವಾಚಾರ್ಯ ಶ್ರೀಗಳ ಹೇಳಿಕೆಗೆ ಇದೀಗ ಆಂದೋಲಾ ಮಠದ ಸಿದ್ದಲಿಂಗ ಸ್ವಾಮೀಜಿ ಪ್ರತಿಕ್ರಿಯೆ ನೀಡಿದ್ದಾರೆ. ನಿಮಗೆ ತಾಕತ್ತಿದ್ದರೆ ಮೈಸೂರಿಗೆ ಹೋಗಿ ಪ್ರತಾಪ್ ಸಿಂಹಗೆ ಚಡ್ಡಿ ಬಿಚ್ಚಿ ಹೊಡೆಯಿರಿ ನೋಡೋಣ. ಮೈಸೂರಿಗೆ ಹೋಗಿ ಪ್ರತಾಪ್ ಸಿಂಹಗೆ ಹೊಡೆದು ಬಂದರೆ ನಿಮ್ಮ ಕಾವಿಗೆ ಗೌರವ ಕೊಡ್ತೀನಿ.
ಯಾರು ಕರೀತಾರೋ ಅಲ್ಲಿಗೆ ಹೋಗಿ ಅವರ ಪರ ಮಾತನಾಡುತ್ತೀರಿ. ನೀವು ಕರೆದವರ ಪರ ಮಾತನಾಡಿ ಬಕೆಟ್ ಹಿಡಿಯುವ ಸ್ವಾಮೀಜಿ. ನೀವು ಬೇಷರತ್ತಾಗಿ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಆಂದೋಲಾ ಮಠದ ಸಿದ್ದಲಿಂಗ ಸ್ವಾಮೀಜಿ ಹೇಳಿಕೆ