ಕರ್ನಾಟಕ

karnataka

ETV Bharat / city

ಸೇಡಂ ತಾಲೂಕಿನ ಐವರು ಪೊಲೀಸರಿಗೆ ಸೋಂಕು - ಪೊಲೀಸರಿಗೆ ತಗುಲಿದ ಕೋವಿಡ್​ ಸೋಂಕು

ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ 5 ಜನ ಪೊಲೀಸರಿಗೆ ಕೊರೊನಾ ತಗುಲಿದೆ. ಜಿಲ್ಲೆಯಲ್ಲಿ ಇಂದು ಒಟ್ಟು 47 ಜನ ಸೋಂಕಿತರು ಪತ್ತೆಯಾಗಿದ್ದಾರೆ..

sedam-police-tested-corona-positive
ಪೊಲೀಸರಿಗೆ ಕೋವಿಡ್​​

By

Published : Jul 21, 2020, 4:03 PM IST

ಸೇಡಂ :ತಾಲೂಕಿನ ಐವರು ಪೊಲೀಸರಿಗೆ ಕೋವಿಡ್​ ಸೋಂಕು ತಗುಲಿರುವುದು ಖಚಿತವಾಗಿದೆ. ಇದರಿಂದಾಗಿ ಸೋಂಕಿತರ ಸಂಖ್ಯೆ 207ಕ್ಕೆ ಏರಿಕೆಯಾಗಿದೆ.

ಮಳಖೇಡ ಪೊಲೀಸ್ ಠಾಣೆಯ ಓರ್ವ ಮಹಿಳಾ ಸಿಬ್ಬಂದಿ ಸೇರಿ ಒಟ್ಟು ಐವರಲ್ಲಿ ಕೊರೊನಾ ಕಾಣಿಸಿ‌. ಮಂಗಳವಾರ ಒಂದೇ ದಿನ 42 ಜನರ ವರದಿ ಪಾಸಿಟಿವ್ ಬಂದಿವೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಸುರೇಶ್‌ ನೇಕಿನ ತಿಳಿಸಿದ್ದಾರೆ. ಇದರಿಂದ ತಾಲೂಕಿನಲ್ಲಿ ತೀವ್ರ ಆತಂಕ ಸೃಷ್ಟಿಯಾಗಿದೆ.

ಈಗಾಗಲೇ ವೈದ್ಯಕೀಯ ಹಾಗೂ ಜೆಸ್ಕಾಂ ಸಿಬ್ಬಂದಿಯಲ್ಲಿ ಕಾಣಿಸಿದ್ದ ಕೋವಿಡ್​ ಪೊಲೀಸರಿಗೂ ತಗುಲಿದೆ.

ABOUT THE AUTHOR

...view details