ಕಲಬುರಗಿ : ವೀರಶೈವ ಲಿಂಗಾಯತ ಮಠಗಳಿಗೆ ಸರ್ಕಾರ ಅನುದಾನ ಬಿಡುಗಡೆ ಮಾಡಿಲ್ಲದ ಕಾರಣ ಶ್ರೀಶೈಲ ಸಾರಂಗಧರ ದೇಶಿಕೇಂದ್ರ ಮಠದ ಸಾರಂಗಾಧರೇಶ್ವರ ಸ್ವಾಮೀಜಿ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಲಬುರಗಿಯಲ್ಲಿ ಹೇಳಿಕೆ ನೀಡಿದ ಸ್ವಾಮೀಜಿ, ಬಸವರಾಜ ಬೊಮ್ಮಾಯಿ ಸಿಎಂ ಆಗಲು ವೀರಶೈವ ಲಿಂಗಾಯತ ಮಠಾಧೀಶರೇ ಕಾರಣ. ಹೀಗಿದ್ದರೂ ವೀರಶೈವ ಲಿಂಗಾಯತ ಮಠಗಳಿಗೆ ಅನುದಾನ ನೀಡಿಲ್ಲ. ರಾಜ್ಯ ಸರ್ಕಾರ ನಿನ್ನೆ ಹಿಂದುಳಿದ ವರ್ಗದ ಮಠಗಳಿಗೆ ₹119 ಕೋಟಿ ಅನುದಾನ ನೀಡಿದೆ. ಇದು ಸ್ವಾಗತಾರ್ಹ. ಆದರೆ, ವೀರಶೈವ ಲಿಂಗಾಯತ ಮಠಗಳಿಗೆ ಯಾಕೆ ಅನುದಾನ ನೀಡಿಲ್ಲ? ಎಂದು ಸ್ವಾಮೀಜಿ ಸಿಎಂ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.