ಕಲಬುರಗಿ:ನಗರದಲ್ಲಿ ಮತ್ತೆ ರೌಡಿಗಳು ಅಟ್ಟಹಾಸ ಮೆರೆದಿದ್ದಾರೆ. ಮನೆ ಮುಂದೆ ಕುಡಿದು ಗದ್ದಲ ಮಾಡಬೇಡಿ ಅಂದಿದ್ದಕ್ಕೆ ಮನೆಮಂದಿ ಮೇಲೆ ಹಲ್ಲೆ ಮಾಡಿದ ಘಟನೆ ಮಾಣಿಕೇಶ್ವರಿ ಕಾಲೋನಿಯಲ್ಲಿ ನಡೆದಿದೆ.
ಗಲಾಟೆ ಮಾಡ್ಬೇಡಿ ಅಂದಿದ್ದೇ ತಪ್ಪಾಗೋಯ್ತು.. ಕಲಬುರಗಿಯಲ್ಲಿ ಪುಡಿ ರೌಡಿಗಳ ಅಟ್ಟಹಾಸ - undefined
ಕುಡಿದು ಗಲಾಟೆ ಮಾಡುವಾಗ, ಗಲಾಟೆ ಮಾಡಬೇಡಿ ಎಂದು ತಿಳಿ ಹೇಳಿದ್ದಕ್ಕೆ ಕಲಬುರಗಿಯಲ್ಲಿ ಬೀರಬಲ್ ಸಿಂಗ್ ಎಂಬುವರ ಮೇಲೆ ಪುಡಿ ರೌಡಿಗಳು ಕಲ್ಲು ಕಟ್ಟಿಗೆಯಿಂದ ಹಲ್ಲೆ ಮಾಡಿ ಗಾಯಗೊಳಿಸಿದ್ದಾರೆ.

ರೌಡಿಗಳು ಅಟ್ಟಹಾಸ
ರೌಡಿ ಕೆಂಚ್ಯಾ, ಶಾಣ್ಯ ಮತ್ತು ಸಂಗಡಿಗರು ಸೇರಿ ಈ ಕೃತ್ಯ ಎಸಗಿದ್ದಾರೆ ಎಂದು ತಿಳಿದುಬಂದಿದೆ. ರೌಡಿಗಳ ಅಟ್ಟಹಾಸ ಮನೆ ಮುಂದಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಕಲಬುರಗಿಯಲ್ಲಿ ಪುಡಿ ರೌಡಿಗಳ ಅಟ್ಟಹಾಸ
ಘಟನೆಯಲ್ಲಿ ಬೀರಬಲ್ ಸಿಂಗ್ ಸೇರಿದಂತೆ ಹಲವರಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಲಾಗಿದೆ. ಈ ಬಗ್ಗೆ ನ್ಯೂ ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಲ್ಲೆ ಮಾಡಿ ತಲೆಮರೆಸಿಕೊಂಡಿರುವ ರೌಡಿಗಳ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ.