ಕಲಬುರಗಿ : ಬರ್ತ್ಡೇ ಆಚರಣೆಗೆ ಹೋಗಿ ಬರುವಷ್ಟರಲ್ಲಿ ಕಳ್ಳರು ಕೈಚಳಕ ತೋರಿದ್ದು, 9.5 ತೊಲ ಚಿನ್ನಾಭರಣವನ್ನು ಕದ್ದು ಪರಾರಿಯಾಗಿರುವ ಘಟನೆ ಜಗತ್ ಕ್ರಾಸ್ ಬಳಿಯ ಅಂಚೆ ಕಚೇರಿ ಹಿಂಭಾಗದ ಕಟ್ಟಡದಲ್ಲಿ ನಡೆದಿದೆ. ಅಂಬಾಲಾಲ ತಾಪಸೆ ಎಂಬುವರಿಗೆ ಸೇರಿದ ಮನೆಯಲ್ಲಿ ಕಳ್ಳತನ ನಡೆದಿದೆ.
ಬರ್ತ್ಡೇ ಪಾರ್ಟಿ ಮುಗಿಸಿ ಬರುವಷ್ಟರಲ್ಲಿ ಕಳ್ಳರ ಕೈಚಳಕ : 9.5 ತೊಲ ಬಂಗಾರ ಕಳವು - Kalburgi latest News
ನಿನ್ನೆ ಸಾಯಂಕಾಲ ನಾಲ್ಕು ಗಂಟೆ ಸುಮಾರಿಗೆ ಹೀರಾಪೂರ ಬಡಾವಣೆಗೆ ಬರ್ತ್ಡೇ ಆಚರಣೆಗೆಂದು ಕುಟುಂಬಸ್ಥರು ತೆರಳಿದ್ದರು. ಈ ವೇಳೆ ಮನೆಗೆ ನುಗ್ಗಿದ ಕಳ್ಳರು ಸುಮಾರು 9.5 ತೊಲ ಚಿನ್ನಾಭರಣವನ್ನು ಕಳ್ಳತನ ಮಾಡಿದ್ದಾರೆ..
![ಬರ್ತ್ಡೇ ಪಾರ್ಟಿ ಮುಗಿಸಿ ಬರುವಷ್ಟರಲ್ಲಿ ಕಳ್ಳರ ಕೈಚಳಕ : 9.5 ತೊಲ ಬಂಗಾರ ಕಳವು 9.5 ತೊಲೆ ಬಂಗಾರ ಕಳವು!](https://etvbharatimages.akamaized.net/etvbharat/prod-images/768-512-02:49:04:1623662344-kn-klb-01-house-theft-ka10050-14062021135132-1406f-1623658892-1101.jpg)
9.5 ತೊಲೆ ಬಂಗಾರ ಕಳವು!
ಮೂರನೇ ಅಂತಸ್ತಿನಲ್ಲಿ ಬಾಡಿಗೆ ಮನೆಯಲ್ಲಿ ಇವರ ಕುಟುಂಬ ವಾಸವಿತ್ತು. ನಿನ್ನೆ ಸಾಯಂಕಾಲ ನಾಲ್ಕು ಗಂಟೆ ಸುಮಾರಿಗೆ ಹೀರಾಪೂರ ಬಡಾವಣೆಗೆ ಬರ್ತ್ಡೇ ಆಚರಣೆಗೆಂದು ಕುಟುಂಬಸ್ಥರು ತೆರಳಿದ್ದರು. ಈ ವೇಳೆ ಮನೆಗೆ ನುಗ್ಗಿದ ಕಳ್ಳರು ಸುಮಾರು 9.5 ತೊಲ ಚಿನ್ನಾಭರಣವನ್ನು ಕಳ್ಳತನ ಮಾಡಿದ್ದಾರೆ.
ಇನ್ನು, ರಾತ್ರಿ 7 ಗಂಟೆಗೆ ತಾಪಸೆ ಕುಟುಂಬ ಮನೆಗೆ ಹಿಂತಿರುಗಿ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಡಿಸಿಪಿ ಆಡೂರು ಶ್ರೀನಿವಾಸ ಸೇರಿ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಶ್ವಾನದಳ, ಬೆರಳಚ್ಚು ತಜ್ಞರು ಸಹ ಪರಿಶೀಲಿಸಿದ್ದಾರೆ. ಈ ಕುರಿತು ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated : Jun 14, 2021, 4:00 PM IST