ಕಲಬುರಗಿ: ಪಾದಚಾರಿಯ ಮೇಲೆ ಲಾರಿ ಹರಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಸೇಡಂ ಪಟ್ಟಣದ ಹಳೆಯ ಕೆಇಬಿ ಕಚೇರಿ ಬಳಿ ಜರುಗಿದೆ.
ಲಾರಿ ಹರಿದು ಪಾದಚಾರಿ ಸ್ಥಳದಲ್ಲೇ ಸಾವು - undefined
ಸೇಡಂ ಪಟ್ಟಣದ ಹಳೆಯ ಕೆಇಬಿ ಕಚೇರಿ ಬಳಿ ಪಾದಚಾರಿಯ ಮೇಲೆ ಲಾರಿ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಸೇಡಂ ಪಟ್ಟಣದ ಬಳಿ ರಸ್ತೆ ಅಪಘಾತ
ಸೇಡಂ ತಾಲೂಕಿನ ಕೊಂಕನಹಳ್ಳಿ ಗ್ರಾಮದ ನಂಗಣ್ಣ (55) ಮೃತ ವ್ಯಕ್ತಿ. ತೀವ್ರ ರಕ್ತಸ್ರಾವದಿಂದ ಬಳಲಿ ಸ್ಥಳದಲ್ಲೇ ಸಾವನ್ನಪಿದ್ದಾನೆ.
ಈ ಸಂಬಂಧ ಸ್ಥಳಕ್ಕೆ ಸಿಪಿಐ ಮಹ್ಮದ್ ಫಸಿಯೋದ್ದಿನ್, ಪಿಎಸ್ಐ ಸುನೀಲ ಮೂಲಿಮನಿ ಭೇಟಿ ನೀಡಿ ಪರೀಶಿಲನೆ ನಡೆಸಿದ್ದು, ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.