ಕರ್ನಾಟಕ

karnataka

ETV Bharat / city

ಮಂಜೂರಾಗಿದ್ದ ಅನುದಾನದಲ್ಲಿ ₹20 ಕೋಟಿ ಕಡಿತ​: ಬಿಜೆಪಿ ವಿರುದ್ಧ ಪ್ರಿಯಾಂಕ್​ ಖರ್ಗೆ ಗರಂ - ಎಸ್​​ಸಿಸಿ‌ಪಿ ಹಾಗೂ ಟಿಎಸ್​ಪಿ ಯೋಜನೆ

ಉಪಮುಖ್ಯಮಂತ್ರಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರಿಗೆ ಪತ್ರ ಬರೆದಿರುವ ಪ್ರಿಯಾಂಕ್ ಖರ್ಗೆ, ಕಡಿತಗೊಳಿಸಿರುವ ಅನುದಾನವನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿದ್ದಾರೆ.

Priyank M. Kharge
ಪ್ರಿಯಾಂಕ್ ಖರ್ಗೆ

By

Published : Jan 2, 2020, 12:11 PM IST

ಕಲಬುರಗಿ: ಮೈತ್ರಿ ಸರ್ಕಾರದಲ್ಲಿ ಚಿಂಚೋಳಿ ಕ್ಷೇತ್ರದ ಅಭಿವೃದ್ಧಿಗಾಗಿ ಎಸ್​​ಸಿಸಿ‌ಪಿ ಹಾಗೂ ಟಿಎಸ್​ಪಿ ಯೋಜನೆಯಡಿ ಮಂಜೂರು ಮಾಡಲಾಗಿದ್ದ ₹ 30 ಕೋಟಿ ಅನುದಾನದಲ್ಲಿ ಬಿಜೆಪಿ ಸರ್ಕಾರ ₹ 20 ಕೋಟಿ ಕಡಿತಗೊಳಿಸಿರುವ ಕಾರಣ ಶಾಸಕ ಪ್ರಿಯಾಂಕ್ ಖರ್ಗೆ ಅವರು ಟ್ವಿಟರ್​ನಲ್ಲಿ ಫುಲ್​ ಗರಂ ಆಗಿದ್ದಾರೆ.

ಮೈತ್ರಿ ಸರ್ಕಾರ ಅನುದಾನ ಬಿಡುಗಡೆ ಮಾಡದ ಕಾರಣ ಕಾಂಗ್ರೆಸ್ ಬಿಟ್ಟು ಬಿಜೆಪಿ‌ ಸೇರಿರುವುದಾಗಿ ಜಾಧವ್ ಹೇಳಿದ್ದರು. ನಾನು ಸಮಾಜ ಕಲ್ಯಾಣ ಸಚಿವನಾಗಿದ್ದಾಗ ಬಿಡುಗಡೆಗೆ ಮಂಜೂರು ಮಾಡಿದ್ದ ₹ 30 ಕೋಟಿ ಅನುದಾನವನ್ನು ಬಿಜೆಪಿ ಸರ್ಕಾರ ₹ 10 ಕೋಟಿಗೆ ಇಳಿಸಿದೆ. ಅದನ್ನು ಮತ್ತೆ ರೂ 30 ಕೋಟಿ ಮಾಡಲು ಪತ್ರ ಬರೆದು ಆಗ್ರಹಿಸಿದ್ದೇನೆ. ಇದು ಜಾಧವ್ ಅವರಿಗೆ ಅನುಕೂಲವಾಗುತ್ತದೆ ಎನ್ನುವ ಭರವಸೆ ನನಗಿದೆ ಅಥವಾ ಅವರು ಮತ್ತೊಮ್ಮೆ ಪಕ್ಷ ತೊರೆಯಬೇಕಾಗುತ್ತದೆ ಎಂದು ಟ್ವಿಟರ್​​ನಲ್ಲಿ ಪ್ರಿಯಾಂಕ್​ ಖರ್ಗೆ ಕುಟುಕಿದ್ದಾರೆ.

ಉಪಮುಖ್ಯಮಂತ್ರಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರಿಗೆ ಪ್ರಿಯಾಂಕ್ ಖರ್ಗೆ ಅವರು ಪತ್ರ ಬರೆದಿದ್ದಾರೆ. ಅನುದಾನದ ಬಳಕೆಗಾಗಿ ಅಂದಾಜು ಪಟ್ಟಿ ತಯಾರಿಸಿ ಕಾಮಗಾರಿ ಪ್ರಾರಂಭಿಸುವ ಹಂತದಲ್ಲಿರುವಾಗಲೇ ರಾಜ್ಯ ಸರ್ಕಾರ ಅನುದಾನ ಕಡಿತಗೊಳಿಸಿ ಉಳಿದ ಮೊತ್ತಕ್ಕೆ ಸಂಬಂಧಿಸಿದಂತೆ ಕ್ರಿಯಾ ಯೋಜನೆ ಸಲ್ಲಿಸಲು ಆದೇಶಿಸಿದೆ. ತಡೆ ಹಿಡಿದಿರುವ ಅನುದಾನವನ್ನು ಕೂಡಲೇ ಬಿಡುಗಡೆಗೊಳಿಸಿ ಎಂದು ಆಗ್ರಹಿಸಿದ್ದಾರೆ.

ABOUT THE AUTHOR

...view details