ಕರ್ನಾಟಕ

karnataka

ETV Bharat / city

ಪ್ರಧಾನಿ ತಮ್ಮ‌‌ ಪಕ್ಷದ ಪ್ರಚಾರಕ್ಕಾಗಿ ಸಾರ್ವಜನಿಕರ ಹಣ ಬಳಕೆ ಮಾಡುತ್ತಿದ್ದಾರೆ : ಖರ್ಗೆ ಕಿಡಿ - ರಾಜ್ಯಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪ

ದೆಹಲಿಯಲ್ಲಿ ಅಧಿವೇಶನ ನಡೆದಿದೆ. ಪಾರ್ಲಿಮೆಂಟ್​​ನಲ್ಲಿ ಮೋದಿಯವರು ಇರಬೇಕು. ಆದರೆ, ಅವರು ಪಾರ್ಲಿಮೆಂಟ್​​ಗೆ ಬರುತ್ತಿಲ್ಲ. ಉಳಿದ ಪ್ರಧಾನಿಗಳು ಒಂದೆರೆಡು ದಿನವಾದರೂ ಬಂದು ಪಾರ್ಲಿಮೆಂಟ್​​​ನಲ್ಲಿ ಕುಳಿತು ಹೋಗುತ್ತಾರೆ. ಆದರೆ, ಇವರು ಬರೋದೇ ಇಲ್ಲ..

Rajya Sabha Opposition Leader Mallikarjun Kharge
ರಾಜ್ಯಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ

By

Published : Dec 26, 2021, 12:12 PM IST

ಕಲಬುರಗಿ :ಪ್ರಧಾನಿ ನರೇಂದ್ರ ಮೋದಿ ಯುಪಿ ಚುನಾವಣೆಗಾಗಿ 15 ದಿನ ಸರ್ಕಾರಿ ಹಣದಲ್ಲಿ ಓಡಾಡಿ ಮತಯಾಚನೆ ಮಾಡಲು ಮುಂದಾಗಿದ್ದಾರೆ ಎಂದು ರಾಜ್ಯಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ‌.

ಪ್ರಧಾನಿ ಯುಪಿ ಚುನಾವಣೆ ಪ್ರಚಾರದ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ವ್ಯಕ್ತಪಡಿಸಿರುವುದು..

ಕಲಬುರಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಿಂದೆಂದೂ ಯಾವ ಪ್ರಧಾನಿಯೂ ಸಹ ಇಷ್ಟೊಂದು ದಿವಸ ಸರ್ಕಾರಿ ಕಾರ್ಯಕ್ರಮ ನಡೆಸಿ, ಮತ ಸೆಳೆಯುವ ಕೆಲಸ ಮಾಡಿಲ್ಲ.

ಆದರೆ, ಪ್ರಧಾನಿ ನರೇಂದ್ರ ಮೋದಿ ಸರ್ಕಾರಿ ಕಾರ್ಯಕ್ರಮದ ಮೂಲಕ ಮತಯಾಚನೆ ಮಾಡುವುದಕ್ಕೆ ಮುಂದಾಗಿದ್ದಾರೆ. ನಿಮ್ಮ ಪಕ್ಷದ ಕಾರ್ಯಕ್ರಮ ಪ್ರತ್ಯೇಕವಾಗಿ ಮಾಡಿ ಎಂದು ಖರ್ಗೆ ಕಿಡಿಕಾರಿದ್ದಾರೆ.

ದೆಹಲಿಯಲ್ಲಿ ಅಧಿವೇಶನ ನಡೆದಿದೆ. ಪಾರ್ಲಿಮೆಂಟ್​​ನಲ್ಲಿ ಮೋದಿಯವರು ಇರಬೇಕು. ಆದರೆ, ಅವರು ಪಾರ್ಲಿಮೆಂಟ್​​ಗೆ ಬರುತ್ತಿಲ್ಲ. ಉಳಿದ ಪ್ರಧಾನಿಗಳು ಒಂದೆರೆಡು ದಿನವಾದರೂ ಬಂದು ಪಾರ್ಲಿಮೆಂಟ್​​​ನಲ್ಲಿ ಕುಳಿತು ಹೋಗುತ್ತಾರೆ. ಆದರೆ, ಇವರು ಬರೋದೇ ಇಲ್ಲ.

ಆರಂಭದ ದಿನ ಬಂದು ಒಂದೇ ಮಾತರಂ ಹೇಳಿ ಹೋದ್ರು ಅಷ್ಟೇ.. ದೇಶ ಮತ್ತು ದೇಶದ ಜನತೆಯನ್ನ ಈ ರೀತಿಯಾಗಿ ಬಳಸಿಕೊಳ್ಳುವುದು ಸರಿಯಲ್ಲ. ಪ್ರಜಾಪ್ರಭುತ್ವವನ್ನು ಹಾಳು ಮಾಡುವಂತಹ ಕೆಲಸಕ್ಕೆ ಪ್ರಧಾನಿಗಳು ಮುಂದಾಗಿದ್ದಾರೆ. ಇದು ಪ್ರಧಾನಿ ಹುದ್ದೆಗೆ ಗೌರವ ತರುವಂತಹದ್ದಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಂಜಾಬ್​​ನಲ್ಲಿ 22 ರೈತ ಸಂಘಟನೆಗಳಿಂದ ಎಸ್​​ಎಸ್​​ಎಂ ಪಕ್ಷ ಸ್ಥಾಪನೆ ವಿಚಾರಕ್ಕೆ ಪ್ರತಿಕ್ರಿಯಿಸಿ, ನಮ್ಮ ತತ್ವ , ಜೊತೆಯಲ್ಲಿ ಪಕ್ಷದ ತತ್ವದ ಸಲುವಾಗಿ ಹೋರಾಟ ಮಾಡುತ್ತಿದ್ದೇೆವೆ. ಆದರೆ, ಪಂಜಾಬ್​​ನಲ್ಲಿ ಕಾಂಗ್ರೆಸ್ ಸರ್ಕಾರ ಬರುವುದು ಗ್ಯಾರೆಂಟಿ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಡಿಕೆಶಿ ನೇತೃತ್ವದಲ್ಲಿ ಚುನಾವಣೆ ಎದುರಿಸುವ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ಈ ಕುರಿತು ಈಶ್ವರ್ ಖಂಡ್ರೆ ಮಾತನಾಡುತ್ತಾರೆ ಎಂದರು.

ಇದನ್ನೂ ಓದಿ:ಮನ್ ಕಿ ಬಾತ್: ಇಂದು ದೇಶದ ಜನತೆಯನ್ನುದ್ದೇಶಿಸಿ ಮೋದಿ ಮನದ ಮಾತು

For All Latest Updates

TAGGED:

ABOUT THE AUTHOR

...view details