ಕಲಬುರಗಿ:ಮರೆಯಾದ ಮಾಣಿಕ್ಯ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಟನೆಯ ಕೊನೆ ಚಿತ್ರ ಜೇಮ್ಸ್ ಇಂದು ತೆರೆ ಕಂಡಿದ್ದು, ಅಭಿಮಾನಿಗಳು ಭವ್ಯ ಸ್ವಾಗತ ಕೋರಿದ್ದಾರೆ. ಸಿನಿಮಾ ನೋಡುವಾಗ ತಮ್ಮ ನೆಚ್ಚಿನ ನಟ ಪುನೀತ್ ರಾಜ್ಕುಮಾರ್ ಇಲ್ಲದ್ದನ್ನು ನೆನೆದು ಅಭಿಮಾನಿಗಳು ಸಿನಿಮಾ ನೋಡುತ್ತಲೇ ಭಾವುಕರಾಗಿದ್ದಾರೆ.
ಅಸಂಖ್ಯಾತ ಅಪ್ಪು ಅಭಿಮಾನಿಗಳು ಜೇಮ್ಸ್ ಖದರ್ ನೋಡಲು ಕಾತುರದಿಂದ ಆಗಮಿಸಿದ್ದಾರೆ. ಕೆಲವರು ಸಿನಿಮಾ ನೋಡುವಾಗ ಭಾವುಕರಾದರೆ, ಇನ್ನೂ ಕೆಲವರು ಚಿತ್ರ ಮಂದಿರಲ್ಲಿಯೇ ಕಣ್ಣೀರು ಹಾಕಿದರು. ಕಲಬುರಗಿ ನಗರದ ಸಂಗಮ ಚಿತ್ರಮಂದಿರದಲ್ಲಿ ಅಭಿಮಾನಿಯೊಬ್ಬ ಸಿನಿಮಾ ನೋಡುತ್ತಲೇ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಚಿತ್ರದಲ್ಲಿ ಪುನೀತ್ ರಾಜ್ಕುಮಾರ್ ಎಂಟ್ರಿ ಆಗುತ್ತಿದ್ದಂತೆ ಬಿಕ್ಕಿ ಬಿಕ್ಕಿ ಅತ್ತು ಭಾವುಕರಾದರು.