ಕಲಬುರಗಿ: ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮದ ಬ್ಲೂಟೂತ್ ಕಿಂಗ್‌ಪಿನ್ ಆರ್.ಡಿ. ಪಾಟೀಲ್‌ಗೆ ಸಿಐಡಿ ಶಾಕ್ ಕೊಟ್ಟಿದೆ. ಆರ್.ಡಿ.ಪಿಗೆ ಸೇರಿದ ಬ್ಯಾಂಕ್ ಅಕೌಂಟ್ಗಳನ್ನು ಅಮಾನತು ಮಾಡಲಾಗಿದೆ. ಆಕ್ಸಿಸ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ ಸೇರಿದಂತೆ ಇತರೆ ಬ್ಯಾಂಕ್ಗಳಲ್ಲಿರುವ ಖಾತೆಗಳನ್ನ ಸಿಐಡಿ ಅಧಿಕಾರಿಗಳು ಫ್ರೀಜ್ ಮಾಡಿದ್ದಾರೆ.
ಪಿಎಸ್ಐ ಪರೀಕ್ಷೆ ಅಕ್ರಮ.. ಬ್ಲೂಟೂತ್ ಕಿಂಗ್‌ಪಿನ್ ಆರ್.ಡಿ. ಪಾಟೀಲ್ ಬ್ಯಾಂಕ್ ಅಕೌಂಟ್‌ಗಳು ಫ್ರೀಜ್ - ಬ್ಲೂಟೂತ್ ಕಿಂಗ್‌ಪಿನ್ ಆರ್ ಡಿ ಪಾಟೀಲ್
PSI recruitment scam ಪಿಎಸ್ಐ ನೇಮಕಾತಿ ಪರೀಕ್ಷೆಯ ಕಿಂಗ್ ಪಿನ್ ಆರ್. ಡಿ. ಪಾಟೀಲ್ ಅಕ್ರಮದಿಂದ ಕೋಟಿ ಕೋಟಿ ಆಸ್ತಿ ಸಂಪಾದಿಸಿರುವ ಆರೋಪ ಕೇಳಿಬಂದ ಕಾರಣ ಆತನ ಅಕೌಂಟ್ಗಳನ್ನ ಲಾಕ್ ಮಾಡಲಾಗಿದೆ.
ಆರ್.ಡಿ. ಪಾಟೀಲ್
ಪಿಎಸ್ಐ ನೇಮಕಾತಿ ಪರೀಕ್ಷೆಯ ಕಿಂಗ್‌ಪಿನ್ ಆರ್. ಡಿ. ಪಾಟೀಲ್ ಅಕ್ರಮದಿಂದ ಕೋಟಿ ಕೋಟಿ ಆಸ್ತಿ ಸಂಪಾದಿಸಿರುವ ಆರೋಪ ಕೇಳಿಬಂದ ಕಾರಣ ಅಕೌಂಟ್ ಫ್ರೀಜ್ ಮಾಡಲಾಗಿದೆ. ಈತ ತನ್ನ ಆಪ್ತರ ಹೆಸರಿನಲ್ಲೂ ಬೇನಾಮಿ ಆಸ್ತಿ ಮಾಡಿರೋ ಶಂಕೆ ಇದೆ. ಈ ನಿಟ್ಟಿನಲ್ಲೂ ಸಿಐಡಿ ತಂಡ ತನಿಖೆ ಕೈಗೊಂಡಿದೆ. ಆರ್.ಡಿ. ಪಾಟೀಲ್ ಸಿಐಡಿ ಕಸ್ಟಡಿ ಸಮಯಾವಕಾಶ ಮುಕ್ತಾಯವಾಗಿದೆ. ಈ ಹಿನ್ನೆಲೆ ಮತ್ತೆ ಎರಡು ದಿನಗಳ ಕಾಲ ಸಿಐಡಿ, ಕಸ್ಟಡಿ ವಿಸ್ತರಣೆ ಮಾಡಿ ವಶಕ್ಕೆ ಪಡೆದಿದೆ.
ಇದನ್ನೂ ಓದಿ:ಪಿಎಸ್ಐ ಅಕ್ರಮ: ರುದ್ರಗೌಡ ಪಾಟೀಲ್, ಮಲ್ಲಿಕಾರ್ಜುನ ಪಾಟೀಲ್‌ಗೆ 13 ದಿನ ಸಿಐಡಿ ಕಸ್ಟಡಿ