ಕರ್ನಾಟಕ

karnataka

ETV Bharat / city

ಪಿಎಸ್ಐ ನೇಮಕಾತಿ ಅಕ್ರಮ : ಕೋವಿಡ್​​ನಿಂದ ಮೃತಪಟ್ಟ ವ್ಯಕ್ತಿಯ ಮೊಬೈಲ್ ಬಳಸಿ ಅಕ್ರಮ - ಪಿಎಸ್ಐ ನೇಮಕಾತಿ ಅಕ್ರಮ ಕಿಂಗ್‌ಪಿನ್ ಆರ್‌.ಡಿ ಪಾಟೀಲ್

PSI Recruitment Scam: ತಮ್ಮ ಬಳಿಯಿರುವ ಮೊಬೈಲ್ ಬಳಸಿದರೆ ಪ್ರಕರಣ ಬಯಲಿಗೆ ಬರುತ್ತದೆ ಎಂದು ಮತ್ತೊಬ್ಬರ ಹೆಸರಿನಲ್ಲಿರುವ ಮೊಬೈಲ್ ಬಳಕೆ ಮಾಡಲಾಗಿದೆ. ಈಗ ಸಿಐಡಿ ಅಧಿಕಾರಿಗಳ ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ..

PSI Recruitment Scam
ಆರ್‌.ಡಿ ಪಾಟೀಲ್

By

Published : Apr 25, 2022, 1:24 PM IST

ಕಲಬುರಗಿ :ಪಿಎಸ್ಐ ನೇಮಕಾತಿ ಪರೀಕ್ಷಾ ಅಕ್ರಮ ಕರ್ಮಕಾಂಡ ಬಗೆದಷ್ಟು ಆಳವಾಗುತ್ತದೆ. ಕೋವಿಡ್​​ನಿಂದ ಮೃತಪಟ್ಟ ವ್ಯಕ್ತಿಯ ಹೆಸರಿನಲ್ಲಿರುವ ಮೊಬೈಲ್ ಬಳಸಿ ಕಿಂಗ್‌ಪಿನ್ ಆರ್‌ ಡಿ ಪಾಟೀಲ್ ಅಕ್ರಮ ಎಸೆಗಿದ್ದಾನೆ ಎಂಬ ಅಂಶ ಬೆಳಕಿಗೆ ಬಂದಿದೆ.

ಬ್ಲೂಟೂತ್ ಡಿವೈಸ್ ಬಳಸಿ ಪರೀಕ್ಷೆ ಬರೆಸಿದ ಆರೋಪದಲ್ಲಿರುವ ಕಿಂಗ್‌ಪಿನ್ ಆರ್‌.ಡಿ ಪಾಟೀಲ್ ಬಳಿ ಸೊನ್ನ ಗ್ರಾಮದ ಲಕ್ಷ್ಮಿಪುತ್ರ ಎಂಬಾತ ಸೂಪರ್‌ವೈಸರ್ ಆಗಿ ಕೆಲಸ ಮಾಡುತ್ತಿದ್ದ.

ಲಕ್ಷ್ಮಿಪುತ್ರ ಕೋವಿಡ್‌ನಿಂದ ಮೃತಪಟ್ಟ ಬಳಿಕ ಆತನ ಎರಡು ಮೊಬೈಲ್‌ಗಳಲ್ಲಿ ಒಂದು ಮೊಬೈಲ್‌ನ್ನ ಆರ್‌ಡಿಪಿ ಇಟ್ಟುಕೊಂಡಿದ್ದನಂತೆ. ಅದೇ ಮೊಬೈಲ್‌‌ನಿಂದ ಪಿಎಸ್‌ಐ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ಎಸಗಿದ್ದ ಎಂಬ ಸಂಗತಿ ವಿಚಾರಣೆ ವೇಳೆ ತಿಳಿದು ಬಂದಿದೆ.

ತಮ್ಮ ಬಳಿಯಿರುವ ಮೊಬೈಲ್ ಬಳಸಿದರೆ ಪ್ರಕರಣ ಬಯಲಿಗೆ ಬರುತ್ತದೆ ಎಂದು ಮತ್ತೊಬ್ಬರ ಹೆಸರಿನಲ್ಲಿರುವ ಮೊಬೈಲ್ ಬಳಕೆ ಮಾಡಲಾಗಿದೆ. ಈಗ ಸಿಐಡಿ ಅಧಿಕಾರಿಗಳ ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಎರಡು ದಿನಗಳ ಹಿಂದೆ ಆರ್‌.ಡಿ ಪಾಟೀಲ್ ಹಾಗೂ ಸ್ನೇಹಿತ ಮಂಜುನಾಥ @ ಮಲ್ಲುಗೌಡನನ್ನ ಬಂಧಿಸಿರುವ ಸಿಐಡಿ, ಇಬ್ಬರನ್ನ 13 ದಿನಗಳ ಕಾಲ ಕಸ್ಟಡಿಗೆ ಪಡೆದಿದ್ದಾರೆ.

ಇದನ್ನೂ ಓದಿ:ಪಿಎಸ್ಐ ಅಕ್ರಮ: ರುದ್ರಗೌಡ ಪಾಟೀಲ್, ಮಲ್ಲಿಕಾರ್ಜುನ ಪಾಟೀಲ್‌ಗೆ 13 ದಿನ ಸಿಐಡಿ ಕಸ್ಟಡಿ

ABOUT THE AUTHOR

...view details