ಕರ್ನಾಟಕ

karnataka

ETV Bharat / city

ಪಿಎಸ್​​ಐ ನೇಮಕಾತಿ ಅಕ್ರಮ: ಡಿವೈಎಸ್​ಪಿ ಸೇರಿ 12 ಪೊಲೀಸ್ ಸಿಬ್ಬಂದಿ ಅಮಾನತು

ಪಿಎಸ್​ಐ ನೇಮಕಾತಿ ಅಕ್ರಮ ಪ್ರಕರಣ ಸಂಬಂಧ ಡಿವೈಎಸ್​ಪಿ ಸೇರಿ 12 ಜನ ಪೊಲೀಸ್​ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.

ಪಿಎಸ್​​ಐ ನೇಮಕಾತಿ ಅಕ್ರಮ
ಪಿಎಸ್​​ಐ ನೇಮಕಾತಿ ಅಕ್ರಮ

By

Published : May 7, 2022, 11:09 AM IST

Updated : May 7, 2022, 3:21 PM IST

ಕಲಬುರಗಿ:ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ‌ ಪ್ರಕರಣದಲ್ಲಿ ಬಂಧನಕ್ಕೆ ಒಳಗಾದ ಡಿವೈಎಸ್​​ಪಿ ಮಲ್ಲಿಕಾರ್ಜುನ ಸಾಲಿ ಹಾಗೂ ಇನ್ಸ್​ಪೆಕ್ಟರ್ ಆನಂದ ಮೇತ್ರೆ ಸೇರಿದಂತೆ 12 ಮಂದಿ ಪೊಲೀಸ್​ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.

ಪ್ರಕರಣದಲ್ಲಿ ರಾಯಚೂರು ಜಿಲ್ಲೆಯ ಲಿಂಗಸೂಗುರು ಉಪವಿಭಾಗದ ಡಿವೈಎಸ್​​ಪಿ ಮಲ್ಲಿಕಾರ್ಜುನ ಸಾಲಿ, ಬೆರಳಚ್ಚು ವಿಭಾಗದ ಇನ್ಸ್​ಪೆಕ್ಟರ್ ಆನಂದ್ ಮೇತ್ರೆ ಅವರನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದರು. ಇದೀಗ ಅವರನ್ನು ಅಮಾನತುಗೊಳಿಸಿ ಸರ್ಕಾರ ಆದೇಶಿಸಿದೆ.

ಕರ್ತವ್ಯಲೋಪ ಆರೋಪದಲ್ಲಿ 10 ಸಿಬ್ಬಂದಿ ಅಮಾನತು:ನಗರದ ಜ್ಞಾನಜ್ಯೋತಿ ಹಾಗೂ ಎಂ.ಎಸ್.ಇರಾಣಿ ಪರೀಕ್ಷಾ ಕೇಂದ್ರಗಳಲ್ಲಿ ಅಕ್ರಮ ನಡೆದಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಕರ್ತವ್ಯನಿರತರಾಗಿದ್ದ ಪೊಲೀಸ್ ಸಿಬ್ಬಂದಿಯನ್ನು ಕರ್ತವ್ಯಲೋಪ ಆರೋಪದಲ್ಲಿ ಅಮಾನತುಗೊಳಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಎನ್. ರವಿಕುಮಾರ್ ತಿಳಿಸಿದ್ದಾರೆ.

ಪಿಎಸ್ಐಗಳಾದ ಶೈಲಮ್ಮ, ನಜಮಾ ಸುಲ್ತಾನ, ಎಎಸ್ಐಗಳಾದ ಶಶಿಕುಮಾರ್, ಲತಾ, ಹೆಡ್ ಕಾನ್ಸ್​ಟೇಬಲ್​ಗಳಾದ ಪಾರುಬಾಯಿ, ಜೈ ಭೀಮ್, ಶರಣಬಸಪ್ಪ, ದಾಮೋದರ್, ಕಾನ್ಸ್​ಟೇಬಲ್​ಗಳಾದ ಪ್ರದೀಪ್ ಮತ್ತು ರಾಜಶ್ರೀ ಸೇರಿ ಒಟ್ಟು 10 ಜನರನ್ನು ಅಮಾನತು ಗೊಳಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಪಿಎಸ್ಐ ಪರೀಕ್ಷೆ ಅಕ್ರಮ.. ಬ್ಲೂಟೂತ್ ಕಿಂಗ್‌ಪಿನ್ ಆರ್.ಡಿ‌. ಪಾಟೀಲ್‌ ಬ್ಯಾಂಕ್​ ಅಕೌಂಟ್‌ಗಳು ಫ್ರೀಜ್​

Last Updated : May 7, 2022, 3:21 PM IST

ABOUT THE AUTHOR

...view details