ಕರ್ನಾಟಕ

karnataka

ETV Bharat / city

ಕೊರೊನಾ ಬಗ್ಗೆ ಭಾಷಣ ಸಾಕು, ಪರಿಹಾರ ಬೇಕು: ಕಲಬುರಗಿ ರೈತ ಸಂಘದಿಂದ ಪ್ರತಿಭಟನೆ - ಕಲಬುರಗಿ ರೈತ ಸಂಘದಿಂದ ಪ್ರತಿಭಟನೆ

ಕೊರೊನಾ ಬಗ್ಗೆ ಭಾಷಣ ಸಾಕು, ಪರಿಹಾರ ಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ತಾವಿರುವ ಸ್ಥಳದಿಂದಲೇ ಪ್ರತಿಭಟನೆ ಮಾಡಿದ್ದಾರೆ.

Protests by the Coalition Farmers' Union kalaburagi
ಕೊರೊನಾ ಬಗ್ಗೆ ಭಾಷಣ ಸಾಕು ಪರಿಹಾರ ಬೇಕು ಕಲಬುರಗಿ ರೈತ ಸಂಘದಿಂದ ಪ್ರತಿಭಟನೆ..!

By

Published : Apr 21, 2020, 10:20 PM IST

ಕಲಬುರಗಿ: ಕೊರೊನಾ ಬಗ್ಗೆ ಭಾಷಣ ಸಾಕು, ಪರಿಹಾರ ಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ತಾವಿರುವ ಸ್ಥಳದಿಂದಲೇ ಪ್ರತಿಭಟನೆ ಮಾಡಿದ್ದಾರೆ.

ಭಾರತ ಲಾಕ್‌ಡೌನ್ ನಿಷೇಧಾಜ್ಞೆ ಇರುವ ಹಿನ್ನೆಲೆ ಸಂಘದ ರಾಜ್ಯ ಉಪಾಧ್ಯಕ್ಷ ಮಾರುತಿ ಮಾನ್ಪಡೆ, ಮುಖಂಡ ಶರಣಬಸಪ್ಪ ಮಮಶೇಟ್ಟಿ ತಾವಿರುವ ಸ್ಥಳದಿಂದಲೇ ಪ್ರತಿಭಟನೆ ಮಾಡಿದರು. ಹೌಸಿಂಗ್ ಬೋರ್ಡ್ ಕಾಲೋನಿಯ ತಮ್ಮ ನಿವಾಸದ ಎದುರು ಕುಟುಂಬದ ಸದಸ್ಯರೊಂದಿಗೆ ಮಾನ್ಪಡೆ ಪ್ರತಿಭಟನೆ ನಡೆಸಿದರು. ಶರಣಬಸಪ್ಪ ಮಮಶೆಟ್ಟಿ ಹೊಲವೊಂದರಲ್ಲಿ ನಿಂತು ಪ್ರತಿಭಟನೆ ನಡೆಸಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಂಡು ವಿಶಿಷ್ಟವಾಗಿ ಪ್ರತಿಭಟಿಸುವ ಮೂಲಕ ಸರ್ಕಾರಕ್ಕೆ ಆಗ್ರಹಿಸಿದರು.

ಭಾಷಣ ನಿಲ್ಲಿಸಿ ಕೆಲಸ ಮಾಡಿ ತಪಾಸಣೆ ತ್ವರಿತಗೊಳಿಸಿ, ಲಾಕ್​ಡೌನ್​ನಿಂದ ನಷ್ಟವಾದ ರೈತರಿಗೆ ಪರಿಹಾರ, ಸ್ವಾಮಿನಾಥನ್ ವರದಿ ಜಾರಿ, ಅಗತ್ಯವಿರುವವರಿಗೆ ಉಚಿತ ಆಹಾರ ಧಾನ್ಯ ಪೂರೈಕೆ, ಆದಾಯ ಕಡಿಮೆ ಇರುವವರಿಗೆ 7500 ರೂಪಾಯಿ ನಗದು ವರ್ಗಾವಣೆ, ವಲಸೆ ಕಾರ್ಮಿಕರಿಗೆ ಮನೆಗಳಿಗೆ ವಾಪಸಾಗಲು ಅವಕಾಶ ಮಾಡಿಕೊಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿದರು.

ABOUT THE AUTHOR

...view details