ಕಲಬುರಗಿ:ಶಂಕಿತ ಕೊರೊನಾ ಸೋಂಕು ತಗುಲಿರುವ ವ್ಯಕ್ತಿಯ ಸಾವಿನ ಹಿನ್ನೆಲೆ, ಕಲಬುರಗಿಯಲ್ಲಿ ಕೊರೊನಾ ಸೋಂಕು ಪರೀಕ್ಷಾ ಕೇಂದ್ರ ತೆರೆಯುವಂತೆ ಶಾಸಕ ಪ್ರಿಯಾಂಕ್ ಖರ್ಗೆ,ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರಿಗೆ ಪತ್ರ ಬರೆದಿದ್ದಾರೆ.
ಕಲಬುರಗಿಯಲ್ಲಿ ಕೊರೊನಾ ಸೋಂಕು ಪರೀಕ್ಷಾ ಕೇಂದ್ರ ತೆರೆಯಿರಿ... ಪ್ರಿಯಾಂಕ್ ಖರ್ಗೆ ಪತ್ರ - Priyank Khark letter to the Minister of Medical Education
ಶಂಕಿತ ಕೊರೊನಾ ಸೋಂಕು ತಗುಲಿರುವ ವ್ಯಕ್ತಿಯ ಸಾವಿನ ಹಿನ್ನೆಲೆ, ಕಲಬುರಗಿಯಲ್ಲಿ ಕೊರೊನಾ ಸೋಂಕು ಪರೀಕ್ಷಾ ಕೇಂದ್ರ ತೆರೆಯುವಂತೆ ಶಾಸಕ ಪ್ರಿಯಾಂಕ್ ಖರ್ಗೆ,ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರಿಗೆ ಪತ್ರ ಬರೆದಿದ್ದಾರೆ.
![ಕಲಬುರಗಿಯಲ್ಲಿ ಕೊರೊನಾ ಸೋಂಕು ಪರೀಕ್ಷಾ ಕೇಂದ್ರ ತೆರೆಯಿರಿ... ಪ್ರಿಯಾಂಕ್ ಖರ್ಗೆ ಪತ್ರ Priyank Khark letter to the Minister of Medical Education](https://etvbharatimages.akamaized.net/etvbharat/prod-images/768-512-6371877-thumbnail-3x2-sow.jpg)
ಕಲಬುರಗಿಯಲ್ಲಿ ಕೊರೊನಾ ಸೋಂಕು ಪರೀಕ್ಷಾ ಕೇಂದ್ರ ತೆರೆಯಿರಿ..ವೈದ್ಯಕೀಯ ಶಿಕ್ಷಣ ಸಚಿವರಿಗೆ ಪ್ರಿಯಾಂಕ್ ಖರ್ಗೆ ಪತ್ರ
ವ್ಯಕ್ತಿಯ ಸಾವಿನ ನಂತರ ಸಹಜವಾಗಿ ಜನರು ಆತಂಕಕ್ಕೊಳಗಾಗಿದ್ದಾರೆ. ಹೀಗಾಗಿ ಈ ಕೂಡಲೇ ಕಲಬುರಗಿಯಲ್ಲಿ ಕೊರೊನಾ ವೈರಸ್ ಪತ್ತೆ ಹಚ್ಚಲು ಪರೀಕ್ಷಾ ಕೇಂದ್ರವನ್ನ ಪ್ರಾರಂಭಿಸುವಂತೆ ಕೋರಿದ್ದಾರೆ. ಪ್ರಸ್ತುತ, ಕೊರೊನಾ ವೈರಸ್ ಪತ್ತೆ ಮಾಡಲು ರಕ್ತದ ಮಾದರಿಯನ್ನ ಬೆಂಗಳೂರಿಗೆ ಕಳಿಸಬೇಕಾಗಿದೆ.
ಇದರಿಂದಾಗಿ ಬಹಳಷ್ಟು ಕಾಲಾವಕಾಶ ಬೇಕಾಗಲಿದ್ದು, ಚಿಕಿತ್ಸೆಗೆ ವಿಳಂಬವಾಗುವ ಸಾಧ್ಯತೆಯಿದೆ. ಆದರಿಂದ ವೈರಸ್ ಪತ್ತೆಗಾಗಿ ಪರೀಕ್ಷಾ ಕೇಂದ್ರ ತೆರೆಯಲು ಮನವಿ ಮಾಡಿದ್ದಾರೆ.