ಕಲಬುರಗಿ: ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಿರುವ ಪೊಲೀಸ್ ಇಲಾಖೆ ಸಿಬ್ಬಂದಿಗೆ ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ರಕ್ಷಾ ಕವಚಗಳನ್ನು ವಿತರಿಸಿದ್ದಾರೆ.
ಮಾರಣಾಂತಿಕ ಕೊರೊನಾ ವಿರುದ್ಧ ಹಗಲಿರುಳು ಶ್ರಮಿಸುತ್ತಿರುವ ಪೊಲೀಸ್ ಸಿಬ್ಬಂದಿ ಬೆನ್ನಿಗೆ ನಿಲ್ಲುವುದು ನಮ್ಮ ಕರ್ತವ್ಯವಾಗಿದೆ. ಈ ರೋಗಕ್ಕೆ ದೇಶದಲ್ಲಿಯೇ ಮೊದಲ ಸಾವಾಗಿದ್ದು ನಮ್ಮ ಕಲಬುರಗಿಯಲ್ಲಿ. ಆ ನಂತರದಲ್ಲಿ ಕಟ್ಟುನಿಟ್ಟಾಗಿ ಜಾರಿಗೆ ತಂದ ನಿಯಮಗಳಿಂದಾಗಿ ರೋಗ ವ್ಯಾಪಕವಾಗಿ ಹಬ್ಬದಂತೆ ನಿಯಂತ್ರಿಸಲಾಯಿತು. ಈ ಕಾರ್ಯದಲ್ಲಿ ಪೊಲೀಸ್ ಇಲಾಖೆಯ ಪಾತ್ರ ಮಹತ್ವದ್ದಾಗಿದ್ದು, ಸಿಬ್ಬಂದಿ ಹಗಲಿರುಳು ಶ್ರಮಿಸಿ ಕಲಬುರಗಿ ಜಿಲ್ಲೆ, ಅದರಲ್ಲೂ ಪ್ರಮುಖವಾಗಿ ನಗರವ್ಯಾಪ್ತಿಯ ಪ್ರಮುಖ ಪ್ರದೇಶಗಳಲ್ಲಿ ನಾಕಾಬಂದಿ ಹಾಕಿ ಚೆಕ್ ಪೋಸ್ಟ್ ನಿರ್ಮಿಸಲಾಗಿದೆ.