ಕಲಬುರಗಿ:ಪಿಎಸ್‌ಐ ಪರೀಕ್ಷಾ ನೇಮಕಾತಿ ಅಕ್ರಮ ಪ್ರಕರಣ ಕುರಿತಾಗಿ ಕಲಬುರಗಿಯಲ್ಲಿ ಶಾಸಕ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಸಿಐಡಿ ತನಿಖೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿಲ್ಲ. ತನಿಖಾಧಿಕಾರಿಗಳು ಕಲಬುರಗಿ ಜಿಲ್ಲೆಗೆ ಮಾತ್ರ ಕೇಂದ್ರೀಕೃತವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರಾಜ್ಯದ ಬೇರೆ ಕಡೆ ನಡೆಯುತ್ತಿರುವ ಅಕ್ರಮಗಳ ಬಗ್ಗೆ ಸರ್ಕಾರ ಆಸಕ್ತಿ ತೋರಿಸುತ್ತಿಲ್ಲ ಎಂದಿದ್ದಾರೆ.
ಆರ್.ಡಿ.ಪಾಟೀಲ್ ಸೇರಿದಂತೆ ಕೆಲವರು ಸರ್ಕಾರಕ್ಕೆ ಚಾಲೆಂಜ್ ಎಸೆಯುತ್ತಿದ್ದಾರೆ. ಅಕ್ರಮದಲ್ಲಿ ಇನ್ಯಾರು ಭಾಗಿಯಾಗಿದ್ದಾರೆ ಎಂಬುದರ ಬಗ್ಗೆ ಬಹಿರಂಗಪಡಿಸುತ್ತೇವೆ ಎಂದು ಬಂಧಿತರು ಹೇಳಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಆದರೆ ಹೆಸರು ಬಹಿರಂಗಗೊಳಿಸುವುದಕ್ಕೆ ಸರ್ಕಾರ ಯಾಕೆ ಹಿಂದೇಟು ಹಾಕುತ್ತಿದೆ? ಎಂದು ಪ್ರಶ್ನಿಸಿದರು.