ಕಲಬುರಗಿ: ಡೆಡ್ಲಿ ಕೊರೊನಾ ಓಡಿಸಿ ಬೆಚ್ಚಗೆ ಮಲಗಿದ್ದ ಕಲಬುರಗಿ ಮಂದಿಗೆ ಇದೀಗ ಮತ್ತೊಂದು ಕಂಟಕ ಎದುರಾಗುತ್ತೇನೋ ಅನ್ನೋ ಆತಂಕ ಶುರುವಾಗಿದೆ. ಬೆಂಗಳೂರಿಗೆ ಒಂದು ಸ್ಯಾಂಪಲ್ ಕಳುಹಿಸಲಾಗಿದ್ದು, ಜಿಲ್ಲಾಡಳಿತಕ್ಕೂ ಆತಂಕ ಶುರುವಾಗಿದೆ.
ದೇಶದಲ್ಲಿಯೇ ಕೊರೊನಾಗೆ ಬಲಿಯಾದ ಮೊದಲ ಜಿಲ್ಲೆ ಎಂಬ ಕುಖ್ಯಾತಿಗೆ ಪಾತ್ರವಾಗಿರುವ ತೊಗರಿಯ ಕಣಜ ಕಲಬುರಗಿಯಲ್ಲಿ ಕೊರೊನಾ ಭಯವಿಲ್ಲ. ಅಷ್ಟೇ ಅಲ್ಲದೇ ಕೊರೊನಾದ ಹೊಸ ಪ್ರಕರಣಗಳು ಸಹ ಹೆಚ್ಚಿಗೇನಿಲ್ಲ. ಆದರೆ ಆಫ್ರಿಕನ್ ಮೂಲದ ಒಮಿಕ್ರಾನ್ ಅನ್ನೋ ಹೊಸ ತಳಿ ವಕ್ಕರಿಸುತ್ತಾ ಅನ್ನೋ ಚಿಂತೆ ಎಲ್ಲರಲ್ಲೂ ಶುರುವಾಗಿದೆ. ಆತನ ಟ್ರಾವೆಲ್ ಹಿಸ್ಟರಿ ಸಾಕಷ್ಟು ಭಯ ಮೂಡಿಸಿದೆ.
ಸೌದಿ ಅರೇಬಿಯಾದಿಂದ ನವೆಂಬರ್ 24ರಂದು ಊರಿಗೆ ವಾಪಸಾಗಿರೋ ವ್ಯಕ್ತಿಗೆ ಸೋಂಕು ದೃಢಪಟ್ಟಿದೆ. ಹೀಗಾಗಿ ಒಮಿಕ್ರಾನ್ ಪತ್ತೆಗಾಗಿ ಆತನ ಗಂಟಲು ದ್ರವದ ಸ್ಯಾಂಪಲ್ಗಳನ್ನು ಬೆಂಗಳೂರಿನ ನಿಮ್ಹಾನ್ಸ್ಗೆ ಕಳುಹಿಸಲಾಗಿದೆ. ಇನ್ನೂ ಎರಡ್ಮೂರು ದಿನಗಳಲ್ಲಿ ಫಲಿತಾಂಶ ಬರುವ ನಿರೀಕ್ಷೆ ಇದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಹೇಳಿದ್ದಾರೆ.