ಕಲಬುರಗಿ: ಸೌದಿ ಅರೇಬಿಯಾದಿಂದ ನಗರಕ್ಕೆ ಆಗಮಿಸಿದ್ದ 34 ವರ್ಷದ ವ್ಯಕ್ತಿಗೆ ಒಮಿಕ್ರಾನ್ ಸೋಂಕಿನ ಲಕ್ಷಣ ಪತ್ತೆ ಹಿನ್ನೆಲೆಯಲ್ಲಿ ವ್ಯಕ್ತಿಯ ಗಂಟಲು ದ್ರವ ಮಾದರಿಯನ್ನು ಬೆಂಗಳೂರಿಗೆ ಪರೀಕ್ಷೆಗಾಗಿ ಕಳುಹಿಸಲಾಗಿದೆ.
ಒಮಿಕ್ರಾನ್ ರೂಪಾಂತರಿ ಪತ್ತೆ: ಕಲಬುರಗಿ ಜನರಲ್ಲಿ ಆತಂಕ - ಒಮೆಕ್ರಾನ್ ಸೊಂಕಿನ ಲಕ್ಷಣ
ಸೌದಿ ಅರೇಬಿಯಾದಿಂದ ಕಲಬುರಗಿಗೆ ಆಗಮಿಸಿದ್ದ 34 ವರ್ಷದ ವ್ಯಕ್ತಿಯನ್ನು ಪರೀಕ್ಷಿಸಿದಾಗ ಒಮಿಕ್ರಾನ್ ಸೊಂಕಿನ ಲಕ್ಷಣ ಪತ್ತೆಯಾಗಿತ್ತು.
ಸೌದಿ ಅರೇಬಿಯಾದಿಂದ ಕಲಬುರಗಿಗೆ ಆಗಮಿಸಿದ್ದ ವ್ಯಕ್ತಿಯನ್ನು ಪರೀಕ್ಷಿಸಿದಾಗ ಒಮಿಕ್ರಾನ್ ಸೊಂಕು ಲಕ್ಷಣ ಪತ್ತೆಯಾಗಿದೆ. ನಂತರ ಜಿಮ್ಸ್ ಆಸ್ಪತ್ರೆಯಲ್ಲಿ ವ್ಯಕ್ತಿಯ ವೈದ್ಯಕೀಯ ಪರೀಕ್ಷೆ ಮಾಡಲಾಗಿತ್ತು. ಈ ವೇಳೆ, ಲಕ್ಷಣಗಳು ಕಂಡುಬಂದಿದ್ದು ಗಂಟಲು ದ್ರವ ಮಾದರಿಯನ್ನು ಡಿಸೆಂಬರ್ 4 ರಂದು ಲ್ಯಾಬ್‌ಗೆ ರವಾನೆ ಮಾಡಿರುವ ಆರೋಗ್ಯ ಹಾಗೂ ಜಿಲ್ಲಾಡಳಿತ ವರದಿಗಾಗಿ ಎದುರು ನೋಡುತ್ತಿದೆ.
ಕಲಬುರಗಿ ನಗರದ ತಾಜ್ ನಗರ ಬಡಾವಣೆ ನಿವಾಸಿಯಾಗಿರುವ ವ್ಯಕ್ತಿ, ನವೆಂಬರ್ 25 ರಂದು ಸೌದಿ ಅರೇಬಿಯಾದಿಂದ ಕಲಬುರಗಿಗೆ ಆಗಮಿಸಿದ್ದ ಎನ್ನಲಾಗಿದೆ. ದೇಶದಲ್ಲಿ ಕೋವಿಡ್‌ಗೆ ಮೊದಲ ಬಲಿಯಾಗಿದ್ದ ಕಲಬುರಗಿಯಲ್ಲಿ ಇದೀಗ ಒಮಿಕ್ರಾನ್ ಭೀತಿ ಶುರುವಾಗಿದೆ.