ಕಲಬುರಗಿ:ನವಜಾತ ಹೆಣ್ಣು ಶಿಶುವನ್ನು ಕೈ ಚೀಲದಲ್ಲಿ ಹಾಕಿ ರಸ್ತೆ ಬದಿ ಬಿಟ್ಟು ಹೋಗಿರುವ ಅಮಾನವೀಯ ಘಟನೆ ಚಿಂಚೋಳಿ ತಾಲೂಕಿನ ರಟಕಲ್ ಗ್ರಾಮದಲ್ಲಿ ನಡೆದಿದೆ. ಸದ್ಯ ಈ ಪುಟ್ಟ ಪಾಪುವನ್ನು ಇಲ್ಲಿನ ಯುವಕರು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ನವಜಾತ ಹೆಣ್ಣು ಮಗುವನ್ನು ಹೊಟ್ಟೆ ಹುರಿ ಕೂಡಾ ಕಟ್ ಮಾಡದೇ ಮೌಂಸದ ಮುದ್ದೆಯಂತೆ ಕೈ ಚೀಲದಲ್ಲಿ ತುಂಬಿ ರಟಕಲ್ ಗ್ರಾಮದ ಬಳಿಯ ಹಳ್ಳದ ಪಕ್ಕದಲ್ಲಿ ಪಾಪಿಗಳು ಬಿಟ್ಟು ಹೋಗಿದ್ದಾರೆ. ಬೆಳಗ್ಗೆ ಹಾಲು ತರಲು ಎಂದು ಹೊರಟ್ಟಿದ್ದ ಗ್ರಾಮದ ಯುವಕರು ಕೈಚೀಲವನ್ನು ಗಮನಿಸಿ ಪರೀಕ್ಷಿಸಿದಾಗ ಮಗು ಇರುವುದು ಗೊತ್ತಾಗಿದೆ.