ಕಲಬುರಗಿ: ಕ್ಷುಲ್ಲಕ ಕಾರಣಕ್ಕೆ ಚಾಕುವಿನಿಂದ ಇರಿದು ಬರ್ಬರವಾಗಿ ಯುವಕನ ಹತ್ಯೆಗೈದ ಘಟನೆ ಚಿತ್ತಾಪುರ ಪಟ್ಟಣದ ಆಶ್ರಯ ಕಾಲೋನಿಯಲ್ಲಿ ನಡೆದಿದೆ. ಮಹಮ್ಮದ್ ರಶೀದ್ (26) ಕೊಲೆಯಾದ ಯುವಕ. ಪುಡಿರೌಡಿ ಲಂಗ್ಡಾ ಸಲೀಂ ಕೊಲೆಗೈದ ಆರೋಪಿ.
ಪೊಲೀಸರು ಲಂಗ್ಡಾ ಸಲೀಂನನ್ನು ಬಂಧಿಸಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ರಶೀದ್ ಹಾಗೂ ಸಲೀಂ ಮಧ್ಯೆ ಜಗಳ ನಡೆದಿದ್ದು, ಗಲಾಟೆ ವಿಕೋಪಕ್ಕೆ ತಿರುಗಿದಾಗ ಸಲೀಂ, ರಶೀದ್‌ಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.