ಕಲಬುರಗಿ: ಚಾಕುವಿನಿಂದ ಇರಿದು ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕಲಬುರಗಿ ನಗರದ ಎಂಎಸ್‌ಕೆ ಮಿಲ್ ಬಳಿ ನಡೆದಿದೆ. 21 ವರ್ಷದ ಸೋಹೆಲ್ ಕೊಲೆಯಾದ ಯುವಕನೆಂದು ಗುರುತಿಸಲಾಗಿದೆ. ಬೆನ್ನಿಗೆ ಮತ್ತು ಎದೆಗೆ ಚಾಕುವಿನಿಂದ ಇರಿಯಲಾಗಿದ್ದು, ಕೊಲೆಯ ಬಳಿಕ ಬೆನ್ನಿನಲ್ಲೇ ಚಾಕು ಬಿಟ್ಟು ಹಂತಕರು ಪರಾರಿಯಾಗಿದ್ದಾರೆ.
ಯುವಕನ ಕೊಲೆಗೈದು ಬೆನ್ನಿನಲ್ಲೇ ಚಾಕು ಬಿಟ್ಟು ಪರಾರಿಯಾದ ಹಂತಕರು - ಕಲಬುರಗಿ ಅಪರಾಧ ಸುದ್ದಿ
ಕಲಬುರಗಿ ನಗರದ ಎಂಎಸ್‌ಕೆ ಮಿಲ್ ಬಳಿ ಚಾಕುವಿನಿಂದ ಇರಿದು ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ನ್ಯೂ ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
![ಯುವಕನ ಕೊಲೆಗೈದು ಬೆನ್ನಿನಲ್ಲೇ ಚಾಕು ಬಿಟ್ಟು ಪರಾರಿಯಾದ ಹಂತಕರು murder-in-kalaburagi](https://etvbharatimages.akamaized.net/etvbharat/prod-images/768-512-14897309-thumbnail-3x2-raar.jpg)
ಯುವಕನ ಕೊಲೆಗೈದು ಬೆನ್ನಿನಲ್ಲೇ ಚಾಕು ಬಿಟ್ಟು ಪರಾರಿಯಾದ ಹಂತಕರು
ಯುವತಿಯ ವಿಚಾರಕ್ಕೆ ಗಲಾಟೆಯಾಗಿ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ. ಈ ಕುರಿತು ನ್ಯೂ ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಲೆಗಡುಕರ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ. ಹಂತಕರ ಪತ್ತೆಯಾದ ನಂತರವಷ್ಟೇ ಕೊಲೆಗೆ ನಿಖರ ಕಾರಣ ತಿಳಿದುಬರಬೇಕಿದೆ.
ಇದನ್ನೂ ಓದಿ:ಪ್ರತಿಷ್ಠಿತ ಐಟಿ ಕಂಪನಿಯಲ್ಲಿ ಉದ್ಯೋಗ: ಗಾಂಜಾ ಮಾರಾಟಕ್ಕಿಳಿದು ಸಿಕ್ಕಿಬಿದ್ದ ಯುವತಿ