ಕರ್ನಾಟಕ

karnataka

ETV Bharat / city

ಕಲಬುರಗಿಯಲ್ಲಿ ವ್ಯಕ್ತಿಯ ಬರ್ಬರ ಕೊಲೆ! - ಕಲಬುರಗಿಯಲ್ಲಿ ಕೊಲೆ

ಚಿತ್ತಾಪುರ - ರಾವೂರ ಮಾರ್ಗ ಮಧ್ಯೆಯ ಯರಗಾ ಕ್ರಾಸ್ ಬಳಿ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಲಾಗಿದೆ.

murder at kalaburagi
ಕಲಬುರಗಿಯಲ್ಲಿ ಕೊಲೆ

By

Published : Jan 11, 2022, 10:18 AM IST

ಕಲಬುರಗಿ: ವ್ಯಕ್ತಿಯೊಬ್ಬರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ, ಮುಖದ ಮೇಲೆ ಸೈಜುಗಲ್ಲು ಎತ್ತಿ ಹಾಕಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಚಿತ್ತಾಪುರ - ರಾವೂರ ಮಾರ್ಗ ಮಧ್ಯೆಯ ಯರಗಾ ಕ್ರಾಸ್ ಬಳಿ ನಡೆದಿದೆ.

ಕಲಬುರಗಿಯಲ್ಲಿ ಕೊಲೆ

ಕೊಲೆಯಾದ ವ್ಯಕ್ತಿ ಅಂದಾಜು 45 ರಿಂದ 50 ವರ್ಷ ವಯಸ್ಸಿನ ಆಸುಪಾಸಿನವರಾಗಿದ್ದು, ಯಾರು? ಯಾವ ಊರಿನವರು? ಅನ್ನೋದು ಇನ್ನೂ ತಿಳಿದು ಬಂದಿಲ್ಲ. ಸ್ಥಳಕ್ಕೆ ವಾಡಿ ಠಾಣೆ ಪೊಲೀಸರು ಭೇಟಿ ನೀಡಿ, ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ:ಹಾಸನದಲ್ಲಿ ಪ್ರತ್ಯೇಕ ಅಪಘಾತ: ಮೂವರು ಸಾವು, ಮೂವರಿಗೆ ಗಂಭೀರ ಗಾಯ

ರಕ್ತ ಇನ್ನೂ ಹಸಿಯಾಗಿದ್ದು, ನಸುಕಿನ ಜಾವ ಕೊಲೆ ನಡೆದಿರಬಹುದು ಎಂದು ಅಂದಾಜಿಸಲಾಗಿದೆ. ಕೊಲೆಗೆ ಕಾರಣ ಪೊಲೀಸರ ತನಿಖೆ ನಂತರ ತಿಳಿದು ಬರಬೇಕಿದೆ. ಯರಗಾ ಹಾಗೂ ರಾವೂರ ಹತ್ತಿರದಲ್ಲಿಯೇ ಘಟನೆ ನಡೆದಿರುವುದರಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ.

ABOUT THE AUTHOR

...view details