ಕಲಬುರಗಿ: ಮಗುವಿನೊಂದಿಗೆ ಬಾವಿಗೆ ಜಿಗಿದು ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲಬುರಗಿ ತಾಲೂಕಿನ ಚಿಂಚೋಳಿ ತಾಲೂಕಿನ ಚಂದಾಪುರ ತಾಂಡಾದಲ್ಲಿ ಬೆಳಗ್ಗೆ ನಡೆದಿದೆ. ತಾಯಿ ಕವಿತಾ (22) ಮತ್ತು ಒಂದೂವರೆ ವರ್ಷದ ಮಗು ಪವನ್ ಮೃತರು.
ಕಲಬುರಗಿ: ಮಗುವಿನೊಂದಿಗೆ ಬಾವಿಗೆ ಜಿಗಿದು ತಾಯಿ ಆತ್ಮಹತ್ಯೆ - Mother child suicide case
ಚಂದಾಪುರ ತಾಂಡಾದಲ್ಲಿ ಇಂದು ಬೆಳಗ್ಗೆ ಮಗನ ಜೊತೆ ಬಾವಿಗೆ ಹಾರಿ ಕವಿತಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಗುವಿನೊಂದಿಗೆ ಬಾವಿಗೆ ಜಿಗಿದು ತಾಯಿ ಆತ್ಮಹತ್ಯೆ
ಮೂರು ವರ್ಷದ ಹಿಂದೆ ಕವಿತಾ ಮದುವೆಯಾಗಿದ್ದು ಒಂದೂವರೆ ವರ್ಷದ ಮಗು ಇತ್ತು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಮಹಿಳೆಯ ಕೊಲೆ : ಪತಿ, ಪ್ರಿಯಕರನ ಮೇಲೆ ಅನುಮಾನ!