ಕಲಬುರಗಿ:ತನ್ನ ಮಗುವಿನಂತೆಯೇ ಅಪ್ಪಿಕೊಂಡು, ತೋಳಲ್ಲಿ ಇಟ್ಟುಕೊಂಡು ಕಾಪಾಡುತ್ತೆ. ತನ್ನ ಮಗುವಿನಂತೆಯೇ ನಾಯಿ ಮರಿ ಮೇಲೆ ಕೋತಿ ಪ್ರೀತಿ ತೋರಿಸುತ್ತಿದ್ದು, ನಾಯಿ ಮರಿಯೂ ಸಹ ಕೋತಿಯ ಹಿಂದೆ ಹಿಂದೆಯೇ ಹೋಗುತ್ತಿರುವ ದೃಶ್ಯ ನೆಟ್ಟಿಗರ ಮನಗೆದ್ದಿದೆ.
ಅಮ್ಮಾ ನಿನ್ನ ತೋಳಿನಲ್ಲಿ ಕಂದ ನಾನು.. ನಾಯಿ ಮರಿಗೆ ತಾಯಿ ಮಮತೆ ತೋರಿದ ಕೋತಿ - Moneky showing mother love to puppy
ಕೋತಿ ಒಂದು ನಾಯಿ ಮರಿಯನ್ನು ಮಡಿಲಲ್ಲಿ ಇಟ್ಟುಕೊಂಡು ಓಡಾಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ..
ಅಮ್ಮಾ ನಿನ್ನ ತೋಳಿನಲ್ಲಿ ಕಂದ ನಾನು..
ಜಿಲ್ಲೆಯ ಅಫಜಲಪುರ ತಾಲೂಕಿನ ಶಿವೂರು ಗ್ರಾಮದಲ್ಲಿ ಇಂತಹದ್ದೊಂದು ಅಪರೂಪದ ಘಟನೆಗೆ ನಡೆದಿದೆ. ಕೋತಿ ಒಂದು ನಾಯಿ ಮರಿಯನ್ನು ಮಡಿಲಲ್ಲಿ ಇಟ್ಟುಕೊಂಡು ಓಡಾಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಎಲ್ಲಿಯೇ ಹೋದರು ಕೋತಿ ನಾಯಿಮರಿಯನ್ನು ಜೊತೆಗಿಟ್ಟುಕೊಂಡು ಹೋಗುತ್ತದೆ. ಯಾರಾದರೂ ಹತ್ತಿರಕ್ಕೆ ಬಂದ್ರೆ ನಾಯಿ ಮರಿಯನ್ನು ಎತ್ತಿಕೊಂಡು ಕೋತಿ ದೂರ ಓಡಿ ಹೋಗ್ತಿದೆ. ಯಾವುದೇ ಪ್ರತಿರೋಧ ಒಡ್ಡದೆ ಕೋತಿಯೊಂದಿಗೆ ನಾಯಿಮರಿ ಸಹ ಓಡಾಡುತ್ತಿರುವುದು ಅಚ್ಚರಿ ಮೂಡಿಸುತ್ತೆ.