ಸೇಡಂ: ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ರೈತರಿಗೆ ಬಿತ್ತನೆ ಬೀಜ ವಿತರಣೆ ಮಾಡಿದರು.
ರೈತರಿಗೆ ಬೀಜ ವಿತರಣೆ ಮಾಡಿದ ಶಾಸಕ ತೇಲ್ಕೂರ - ದೃಢೀಕೃತ ಕಂಪನಿಗಳಿಂದ ಹೆಸರು, ಉದ್ದು ಕಾಳು
ದೃಢೀಕೃತ ಕಂಪನಿಗಳಿಂದ ಹೆಸರು, ಉದ್ದು ಕಾಳು ಖರೀದಿಸಲಾಗಿದೆ. ನಾಲ್ಕು ರೈತ ಸಂಪರ್ಕ ಕೇಂದ್ರಗಳು ಸೇರಿ ಒಟ್ಟು 9 ಕಡೆಗಳಲ್ಲಿ ಬೀಜ ವಿತರಣೆ ಮಾಡಲಾಗುತ್ತಿದೆ. ರೈತರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ, ಅನೇಕ ಸೌಲಭ್ಯಗಳನ್ನು ಮಾಡಿಕೊಡಲಾಗಿದೆ ಎಂದು ಶಾಸಕ ತೇಲ್ಕೂರ ಹೇಳಿದರು.
ನಂತರ ಮಾತನಾಡಿದ ಅವರು, ರೈತರಿಗೆ ಬೇಕಾಗುವ ಬೀಜ ಸಂಗ್ರಹಿಸಿಡಲಾಗಿದೆ. ದೃಢೀಕೃತ ಕಂಪನಿಗಳಿಂದ ಹೆಸರು, ಉದ್ದು ಕಾಳು ಖರೀದಿಸಲಾಗಿದೆ. ನಾಲ್ಕು ರೈತ ಸಂಪರ್ಕ ಕೇಂದ್ರಗಳು ಸೇರಿ ಒಟ್ಟು 9 ಕಡೆಗಳಲ್ಲಿ ಬೀಜ ವಿತರಣೆ ಮಾಡಲಾಗುತ್ತಿದೆ. ರೈತರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ, ಅನೇಕ ಸೌಲಭ್ಯಗಳನ್ನು ಮಾಡಿಕೊಡಲಾಗಿದೆ. ಅದರ ಸದುಪಯೋಗ ರೈತರು ಪಡೆದುಕೊಳ್ಳಬೇಕು ಎಂದರು.
ಕೃಷಿ ಇಲಾಖೆಯ ಉಪ ನಿರ್ದೇಶಕ ಬಾಲರಾಜ ರಂಗರಾಜ, ಸಹಾಯಕ ನಿರ್ದೇಶಕ ಹಂಪಣ್ಣ ಎ.ವೈ, ಕೃಷಿ ಅಧಿಕಾರಿ ಬಸವರಾಜ ಕೊಡಸಾ, ಪ್ರಕಾಶ ರಾಠೋಡ, ಪಿಎಸ್ಐ ಸುಶೀಲಕುಮಾರ, ನಾಗಪ್ಪ ಕೊಳ್ಳಿ, ಲಕ್ಷ್ಮೀನಾರಾಯಣ ಚಿಮ್ಮನಚೋಡಕರ್, ಓಂಪ್ರಕಾಶ ಪಾಟೀಲ್, ಸಾಬಣ್ಣ ಸುಬ್ಬಕ್ಕನೂರ ಇದ್ದರು.