ಕರ್ನಾಟಕ

karnataka

ಫ್ರಂಟ್​​​ಲೈನ್ ವರ್ಕರ್ಸ್​ಗಳಿಗೆ ಸರಿಯಾಗಿ ವ್ಯಾಕ್ಸಿನ್ ಇಲ್ಲ ಅಂದ್ರೆ ಹೇಗೆ..?: ಪ್ರಿಯಾಂಕ್ ಖರ್ಗೆ

ಕಲಬುರಗಿ ಜಿಲ್ಲೆಯಲ್ಲಿ 06 ಲಕ್ಷಕ್ಕೂ ಅಧಿಕ ಜನ ಕೋವಿಡ್ ಫ್ರಂಟ್ ಲೈನ್ ವರ್ಕರ್ಸ್ ಇದ್ದಾರೆ. ನಮಗೆ ರಕ್ಷಣೆ ಕೊಡುವವರಿಗೆ ಸರಿಯಾಗಿ ವ್ಯಾಕ್ಸಿನ್ ಇಲ್ಲ ಅಂದರೆ ಹೇಗೆ..? ಎಂದು ಸರ್ಕಾರಕ್ಕೆ ಶಾಸಕ ಪ್ರಿಯಾಂಕ್ ಖರ್ಗೆ ಪ್ರಶ್ನೆ ಮಾಡಿದ್ದಾರೆ.

By

Published : Jun 17, 2021, 6:24 PM IST

Published : Jun 17, 2021, 6:24 PM IST

mla-priyank-kharge-talk
ಪ್ರಿಯಾಂಕ್ ಖರ್ಗೆ

ಕಲಬುರಗಿ:ಜಿಲ್ಲೆಯಲ್ಲಿ ಕೊರೊನಾ ಸೋಂಕು ಕಡಿಮೆಯಾಗುತ್ತಿದೆ. ಆದರೆ, ವ್ಯಾಕ್ಸಿನೇಷನ್‌ ಸಮರ್ಪಕವಾಗಿ ಆಗುತ್ತಿಲ್ಲ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದರು. ಸುದ್ದಿಗೋಷ್ಠಿ ನಡೆಸಿ‌ ಮಾತನಾಡಿದ ಅವರು, ರಾಜ್ಯ-ಕೇಂದ್ರ ಸರ್ಕಾರಗಳು ಲಸಿಕೆ ಉತ್ಸವ ಮಾಡಿ, ತಮ್ಮ ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಪ್ರಿಯಾಂಕ್ ಖರ್ಗೆ, ಕಾಂಗ್ರೆಸ್​ ನಾಯಕ

ಓದಿ: 'ಕಮಿಷನ್ ಕೇಳಿ ಭಿಕ್ಷೆ ಬೇಡಿ ಕೊಡುತ್ತೇವೆ, ಆದರೆ ಹೆಣದ ಮೇಲೆ ಹಣ ಮಾಡಬೇಡಿ'

27,596 ಫ್ರಂಟ್ ಲೈನ್ ಹೆಲ್ತ್ ವರ್ಕರ್ಸ್​​​​ಗಳ ನೋಂದಣಿಯಾಗಿದೆ. ಇದರಲ್ಲಿ 22 ಸಾವಿರ ಹೆಲ್ತ್ ವರ್ಕರ್ಸ್ ಫಸ್ಟ್ ಡೋಸ್ ಪಡೆದಿದ್ದಾರೆ. 13,714 ಹೆಲ್ತ್ ವರ್ಕರ್ಸ್ ಎರಡನೇ ಡೋಸ್ ಪಡೆದಿದ್ದಾರೆ ಎಂದು ತೋರಿಸುತ್ತಿದ್ದಾರೆ. ಆದರೆ ಶೇ50 ಪ್ರತಿಶತಕ್ಕೂ ಕಡಿಮೆ ಹೆಲ್ತ್ ಕೇರ್ ವರ್ಕರ್ಸ್ ಗೆ ಲಸಿಕೆ ಕೊಡಲು ಇವರಿಂದ ಆಗುತ್ತಿಲ್ಲ.

ಫ್ರಂಟ್ ಲೈನ್ ವರ್ಕರ್ಸ್ 20,590 ಜನ ನೋಂದಣಿ ಆಗಿದ್ದು, 18,819 ಜನ ಮಾತ್ರ ಫಸ್ಟ್ ಡೋಸ್ ಲಸಿಕೆ ಪಡೆದಿದ್ದಾರೆ. 06 ಸಾವಿರ ಜನ ಮಾತ್ರ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ. ಉಳಿದ ಹೆಲ್ತ್ ವರ್ಕರ್ಸ್, ಫ್ರಂಟ್ ಲೈನ್ ವರ್ಕರ್ಸ್ ಲಸಿಕೆ ಯಾವಾಗ ಕೊಡುತ್ತಾರೆ....? ಜಿಲ್ಲೆಯಲ್ಲಿ 06 ಲಕ್ಷಕ್ಕೂ ಅಧಿಕ ಜನ ಕೋವಿಡ್ ಫ್ರಂಟ್ ಲೈನ್ ವರ್ಕರ್ಸ್ ಇದ್ದಾರೆ. ನಮಗೆ ರಕ್ಷಣೆ ಕೊಡುವವರಿಗೆ ಸರಿಯಾಗಿ ವ್ಯಾಕ್ಸಿನ್ ಇಲ್ಲ ಅಂದರೆ ಹೇಗೆ...? ಎಂದು ಸರ್ಕಾರಕ್ಕೆ ಶಾಸಕ ಪ್ರಿಯಾಂಕ್ ಖರ್ಗೆ ಪ್ರಶ್ನೆ ಮಾಡಿದ್ದಾರೆ.

ಕಲ್ಯಾಣ ಕರ್ನಾಟಕದಲ್ಲಿ ಅಪೌಷ್ಟಿಕತೆ ಹೆಚ್ಚಿದೆ:

ಕಲ್ಯಾಣ ಕರ್ನಾಟಕದಲ್ಲಿ ಅಪೌಷ್ಟಿಕತೆ ಹೆಚ್ಚಿದೆ. ಅಪೌಷ್ಟಿಕತೆ ಇರುವುದರಿಂದ ಮೂರನೇ ಅಲೆಯಲ್ಲಿ ಮಕ್ಕಳಿಗೆ ಹೆಚ್ಚು ಸೋಂಕು ತಗುಲುವ ಸಾಧ್ಯತೆ ಇದೆ. ಮಕ್ಕಳಿಗೆ ಮೂರನೇ ಅಲೆಯಿಂದ ರಕ್ಷಣೆ ಕೊಡುವ ಕೆಲಸ ಮಾಡಬೇಕು. ಜಿಲ್ಲೆಯಲ್ಲಿ 2 ಲಕ್ಷ ಮಕ್ಕಳ ನೋಂದಣಿ ಇದ್ದು, 95 ಸಾವಿರ ಮಕ್ಕಳು ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ. ಇದು ನೋಂದಣಿ ಆಗಿರುವ ಮಾಹಿತಿ ಅಷ್ಟೇ. ನೋಂದಣಿ ಆಗದೇ ಇರುವ ಮಕ್ಕಳ ಸಂಖ್ಯೆಯೂ ಜಾಸ್ತಿ ಇದೆ ಎಂದರು.

ಮೋದಿ ಮಾಸ್ಟರ್ ಸ್ಟ್ರೋಕ್ ಗಳಿಂದ ದೇಶದಲ್ಲಿ 13 ಕೋಟಿ ಜನ ಬಡತನ ರೇಖೆಗಿಂತ ಕೆಳಗೆ ಹೋಗಿದ್ದಾರೆ. ಕಾಂಗ್ರೆಸ್ ಶಕ್ತಿ ಕಿಟ್ ಮುಂದಿನ ವಾರದಿಂದ ನನ್ನ ವೈಯಕ್ತಿಕವಾಗಿ ಚಿತ್ತಾಪುರ ಮತಕ್ಷೇತ್ರದಲ್ಲಿ ಅಪೌಷ್ಟಿಕ ಮಕ್ಕಳಿಗೆ ಕೊಡುತ್ತಿದ್ದೇನೆ. ಪ್ರೋಟಿನ್ ಪೌಡರ್ಸ್, ಮಲ್ಟಿ ವಿಟಮಿನ್, ಸಿರಪ್ ಗಳು ಕಿಟ್ ನಲ್ಲಿವೆ. ಅಪೌಷ್ಟಿಕತೆ ಹೊಗಲಾಡಿಸಲು ಕಿಟ್ ಕೊಡುತ್ತಿದ್ದೇನೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.

ABOUT THE AUTHOR

...view details