ಕರ್ನಾಟಕ

karnataka

ETV Bharat / city

ಬೆಲೆ ಏರಿಕೆ ಮೋಸದ ಜಾಲಕ್ಕೆ ಜನ ಸಾಮಾನ್ಯ ಬಲಿ : ಸಿಎಂ ಮಾತನ್ನೂ ಲೆಕ್ಕಿಸದ ವ್ಯಾಪಾರಸ್ಥರು

ರಾಜ್ಯದಲ್ಲಿ ಕೋವಿಡ್​ ಕಾವಿಗೆ ಸಾಮಾನ್ಯ ಜನರು ಭೀತಿಯಲ್ಲಿ ಬದುಕುತ್ತಿರುವುದು ಒಂದು ಕಡೆಯಾದರೆ ಲಾಕ್​ಡೌನ್ ಬಂಡವಾಳವಾಗಿಸಿಕೊಂಡಿರುವ ಕೆಲ ವರ್ತಕರು ದೈನಂದಿನ ಸಾಮಗ್ರಿಗಳ ಬೆಲೆಯನ್ನು ತಮಗಿಷ್ಟ ಬಂದಂತೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದು, ಕೊರೊನಾ ಕಾವಿಗೆ ಬೆಂದಿರುವ ಜನರ ಹೊಟ್ಟೆಯ ಮೇಲೆ ಬರೆ ಹಾಕಿ ಹಾಕುತ್ತಿದ್ದಾರೆ.

merchants-selling-daily-essential-things-for-more-rate-in-kalaburagi
ಕಲಬುರಗಿ ದಿನಸಿ ಸಾಮಗ್ರಿ ಬೆಲೆ ಏರಿಕೆ

By

Published : Apr 17, 2020, 3:35 PM IST

ಕಲಬುರಗಿ: ಕೊರೊನಾ ಕಾಟಕ್ಕೆ ಜನ ಜೀವನ ಸಂಪೂರ್ಣ ಅಲ್ಲೋಲ ಕಲ್ಲೋಲವಾಗಿದೆ. ಕೊರೊನಾ ಅಟ್ಟಹಾಸಕ್ಕೆ ಕಡಿವಾಣ ಹಾಕಲು ಭಾರತ ಲಾಕ್​​​​​ಡೌನ್ ಮಾಡಲಾಗಿದೆ. ಸದ್ಯ ಇದನ್ನೇ ಬಂಡವಾಳ ಮಾಡಿಕೊಂಡ ಕೆಲ ದಿನಸಿ ಅಂಗಡಿ ಮಾಲಿಕರು ಗ್ರಾಹಕರ ಜೇಬಿಗೆ ಕತ್ತರಿ ಹಾಕುತ್ತಿದ್ದಾರೆ.

ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಬೆಲೆ ಏರಿಕೆಯಿಂದ ಬಡವರು, ಮಧ್ಯಮ ವರ್ಗದವರು ದೈನಂದಿನ ಅಗತ್ಯ ವಸ್ತುಗಳು ಖರೀದಿಸಿ ಹೊಟ್ಟೆ ತುಂಬಿಸಿಕೊಳ್ಳಲು ಪರದಾಡುವಂತಾಗಿದೆ. ಕೆಲ ವ್ಯಾಪಾರಸ್ಥರು ಕೃತಕ ಅಭಾವ ಸೃಷ್ಟಿಸಿ ಅಗತ್ಯ ವಸ್ತುಗಳ ಬೆಲೆ ಹೆಚ್ಚಿಸಿ ಮಾರಾಟ ಮಾಡುತ್ತಿದ್ದಾರೆ ಎಂದು ಗ್ರಾಹಕರು ಆರೋಪಿಸಿದ್ದಾರೆ.

ಬೆಲೆ ಏರಿಕೆ ಮೋಸದ ಜಾಲಕ್ಕೆ ಜನ ಸಾಮಾನ್ಯ ಬಲಿ

ಅಕ್ಕಿ, ಬೇಳೆ, ಸಕ್ಕರೆ, ಗೋಧಿ ಹೀಗೆ ಅಡುಗೆ ಮನೆಗೆ ಬೇಕಾಗುವ ಪ್ರತಿಯೊಂದು ಆಹಾರ ಪದಾರ್ಥಗಳ ಬೆಲೆ ಏರಿಕೆಯಾಗಿದೆ. ಪ್ರತಿ ಕೆಜಿಗೆ 15 - 20 ರೂ. ಬೆಲೆ ಹೆಚ್ಚಳ ಮಾಡಲಾಗಿದೆ. ಅಲ್ಲದೇ ಪ್ಯಾಕಿಂಗ್ ಆಹಾರ ಪದಾರ್ಥಗಳ ಮೇಲೂ 10-15 ರೂ. ಹೆಚ್ಚಳ ಮಾಡಿ ಮಾರಾಟ ಮಾಡಲಾಗುತ್ತಿದೆ.

ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸರ್ಕಾರ ಖಡಕ್ ಎಚ್ಚರಿಕೆ ನೀಡಿದರೂ ಇದ್ಯಾವುದಕ್ಕೂ ಕ್ಯಾರೆ ಎನ್ನದ ವರ್ತಕರು ಮನಬಂದಂತೆ ಬೆಲೆ ಹೆಚ್ಚಳ ಮಾಡಿ ಗ್ರಾಹಕರ ಜೇಬಿಗೆ ಕತ್ತರಿ ಹಾಕುತ್ತಿದ್ದಾರೆ ಅನ್ನೋದು ಜನರ ಆರೋಪವಾಗಿದೆ. ಈ ಕುರಿತು ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜನ ಆಗ್ರಹಿಸಿದ್ದಾರೆ.

ABOUT THE AUTHOR

...view details