ಕಲಬುರಗಿ: ಕಳ್ಳತನ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು 48 ಗಂಟೆಗಳಲ್ಲಿ ಬಂಧಿಸುವಲ್ಲಿ ರೋಜಾ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಲಬುರಗಿ: ಕಳ್ಳತನ ಮಾಡಿ ಜೈಲು ಸೇರಿದ ಎಂಬಿಎ ವಿದ್ಯಾರ್ಥಿ
ಐಷಾರಾಮಿ ಜೀವನ ನಡೆಸಲು ರೋಜಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಾಡಹಗಲೇ ಕಳ್ಳತನ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
arrest
ಗೌಸ್ ಪಟೇಲ್ (24) ಬಂಧಿತ ಆರೋಪಿ. ಕಲಬುರಗಿಯ ಪಾಶಾಪೂರ ರೋಜಾ ಬಡಾವಣೆಯ ನಿವಾಸಿಯಾದ ಗೌಸ್ ಪಟೇಲ್, ಎಂಬಿಎ ವ್ಯಾಸಂಗ ಮಾಡುತ್ತಿದ್ದಾನೆ. ಬಂಧಿತನಿಂದ 21 ಗ್ರಾಂ ಚಿನ್ನಾಭರಣ ಮತ್ತು 2,87,000 ರೂ.ಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ.
ಐಷಾರಾಮಿ ಜೀವನ ನಡೆಸಲು ಆರೋಪಿ, ರೋಜಾ ಠಾಣಾ ವ್ಯಾಪ್ತಿಯಲ್ಲಿ ಹಗಲು ಹೊತ್ತಿನಲ್ಲಿ ಮನೆಯೊಂದಕ್ಕೆ ಕನ್ನ ಹಾಕಿ ಪರಾರಿಯಾಗಿದ್ದ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ರೋಜಾ ಠಾಣೆ ಪೊಲೀಸರು 48 ಗಂಟೆಯಲ್ಲಿ ಆರೋಪಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.