ಸೇಡಂ: ಅಪ್ಪು ಹುಟ್ಟು ಹಬ್ಬದ ಹಿನ್ನೆಲೆ ತಾಲೂಕಿನ ಬೆನಕನಹಳ್ಳಿಯಲ್ಲಿ ಬೃಹತ್ ರಕ್ತದಾನ ಶಿಬಿರ ಜರುಗುತ್ತಿದ್ದು, ದೊಡ್ಮನೆ ಕುಡಿ ತೇಜ್ ಧೀರೆನ್ ರಾಮ್ ಕುಮಾರ್ ಶುಭ ಕೋರಿದ್ದಾರೆ. ಇದೇ ಮಾರ್ಚ್ 17 ರಂದು ಪುನೀತ್ ರಾಜ್ಕುಮಾರ್ ಜನ್ಮ ದಿನ ಪ್ರಯುಕ್ತ ಬೆನಕನಹಳ್ಳಿ ಗ್ರಾಮದ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಅಪ್ಪು ಅಭಿಮಾನಿ ಬಳಗದ ವತಿಯಿಂದ ಬೃಹತ್ ರಕ್ತದಾನ ಮತ್ತು ನೇತ್ರದಾನ ಶಿಬಿರವನ್ನ ಬೆಳಗ್ಗೆ 10.30ಕ್ಕೆ ಹಮ್ಮಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಡಾ. ರಾಜ್ಕುಮಾರ್ ಅವರ ಮೊಮ್ಮಗ ತೇಜ್ ಧೀರನ್ ರಾಮ್ ಕುಮಾರ್ ಅವರು ವಿಡಿಯೋ ಸಂದೇಶದ ಮೂಲಕ ಶುಭ ಹಾರೈಸಿದ್ದಾರೆ.
ಅಪ್ಪು ಹುಟ್ಟುಹಬ್ಬದಂದು ಬೃಹತ್ ರಕ್ತದಾನ ಶಿಬಿರ: ಶುಭ ಕೋರಿದ ದೊಡ್ಮನೆ ಕುಡಿ - ಅಪ್ಪು ಹುಟ್ಟುಹಬ್ಬದಂದು ಬೃಹತ್ ರಕ್ತದಾನ ಶಿಬಿರ
ಇದೇ ಮಾರ್ಚ್ 17 ರಂದು ಪುನೀತ್ ರಾಜ್ಕುಮಾರ್ ಜನ್ಮ ದಿನ ಪ್ರಯುಕ್ತ ಬೆನಕನಹಳ್ಳಿ ಗ್ರಾಮದ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಬೃಹತ್ ರಕ್ತದಾನ ಮತ್ತು ನೇತ್ರದಾನ ಶಿಬಿರ ಹಮ್ಮಿಕೊಳ್ಳಲಾಗಿದ್ದು, ದೊಡ್ಮನೆ ಕುಡಿ ತೇಜ್ ಧೀರೆನ್ ರಾಮ್ ಕುಮಾರ್ ಶುಭ ಕೋರಿದ್ದಾರೆ.
ತೇಜ್ ಧೀರೆನ್ ರಾಮ್ ಕುಮಾರ್
ರಕ್ತದಾನ ಶಿಬಿರಕ್ಕೆ ಶುಭ ಕೋರಿದ ದೊಡ್ಮನೆ ಕುಡಿ ತೇಜ್ ಧೀರೆನ್ ರಾಮ್ ಕುಮಾರ್
ಮಾರ್ಚ್ 17 ರಂದು ಅಪ್ಪು ಮಾಮಾ ಅವರ ಹುಟ್ಟುಹಬ್ಬದ ನಿಮಿತ್ತ ಬೆನಕನಹಳ್ಳಿ, ಕಲಬುರಗಿ ಜಿಲ್ಲೆಯಲ್ಲಿ ನಡೆಯುತ್ತಿರುವ ರಕ್ತದಾನ ಹಾಗೂ ನೇತ್ರದಾನ ಶಿಬಿರ ಶ್ರದ್ಧೆಯಿಂದ, ಅಚ್ಚುಕಟ್ಟಾಗಿ ಮಾಡಿ ಎಂದು ಶುಭ ಕೋರಿದ್ದಾರೆ.
ಇದನ್ನೂ ಓದಿ:'ದಿ ಕಾಶ್ಮೀರ್ ಫೈಲ್ಸ್' ಸಿನಿಮಾದಲ್ಲಿ ರಾಜಕೀಯ ಬೆರೆಸಬೇಡಿ: ತಾರಾ ಮನವಿ