ಕಲಬುರಗಿ: ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯೆ ನೀಡಿದ್ದು, ಮರು ಪರೀಕ್ಷೆ ನಡಿಸೋದು ಬಿಡೋದು ಸರ್ಕಾರಕ್ಕೆ ಬಿಟ್ಟ ವಿಷಯ. ಮೊದಲು ತನಿಖೆಯಾಗಿ ಅಕ್ರಮವೆಸಗಿದವರಿಗೆ ಶಿಕ್ಷೆ ಆಗಲಿ. ಮರು ಪರೀಕ್ಷೆಯ ಮೂಲಕ ಅಕ್ರಮ ಮುಚ್ಚಿ ಹಾಕುವ ಪ್ರಯತ್ನ ಆಗಬಾರದು.
ಅಕ್ರಮ ಯಾಕೆ ನಡೆಯಿತು? ಭಾಗಿಯಾದವರು ಯಾರು? ನಿಷ್ಪಕ್ಷಪಾತ ತನಿಖೆ ಆಗಲಿ, ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿ ಎಂದು ಒತ್ತಾಯಿಸಿದರು. ಸರ್ಕಾರಿ ಪೊಲೀಸ್ ತರಬೇತಿ ಕೇಂದ್ರ ಇದ್ದರೂ ಖಾಸಗಿ ಕೇಂದ್ರಗಳಲ್ಲಿ ಪರೀಕ್ಷೆ ನಡಿಸೋ ಅಗತ್ಯ ಏನಿದೆ ಅಂತಾ ಪ್ರಶ್ನಿಸಿದ ಖರ್ಗೆ, ಮರು ಪರೀಕ್ಷೆ ನಡೆಸುತ್ತೀರೋ, ತನಿಖೆ ಮಾಡಿ ಸರಿಪಡಿಸುತ್ತೀರೋ, ಹೈಕೋರ್ಟ್ ಜಡ್ಜ್ ಮೂಲಕ ತನಿಖೆ ಮಾಡುತ್ತೀರೋ ಇದು ಸರ್ಕಾರಕ್ಕೆ ಬಿಟ್ಟ ವಿಚಾರ ಎಂದರು.