ಕಲಬುರಗಿ:ಬಸನಗೌಡ ಪಾಟೀಲ ಯತ್ನಾಳ ಸಚಿವರಿಗೆ ರಾಜೀನಾಮೆ ನೀಡಲು ಹೇಳಿದ್ದಾರೆ. ಉಳಿದವರು ಏನು ಉತ್ತರ ಕೊಡುತ್ತಾರೆ ನೋಡೊಣ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದ್ದಾರೆ.
ಯತ್ನಾಳ್ ರಾಜೀನಾಮೆ ನೀಡಿ ಅಂದಿದ್ದಾರೆ, ಉಳಿದವರು ಏನಂತಾರೆ ನೋಡೋಣ: ಬಿ.ಸಿ. ಪಾಟೀಲ - bc patil about panchamasali protest
ಬಸನಗೌಡ ಪಾಟೀಲ ಯತ್ನಾಳ ಸಚಿವರಿಗೆ ರಾಜೀನಾಮೆ ನೀಡಲು ಹೇಳಿದ್ದಾರೆ. ಅದಕ್ಕೆ ಉಳಿದವರು ಏನ್ ಉತ್ತರ ಕೊಡ್ತಾರೆ ನೋಡೋಣ ಎಂದು ಸಚಿವ ಬಿ.ಸಿ. ಪಾಟೀಲ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪಾಟೀಲ, ಪಂಚಮಸಾಲಿ ಹೋರಾಟ ಮುಗಿಸಿ ಹೋಗಿದ್ದಾರೆ ಎಂದು ಶಾಸಕರೊಬ್ಬರಿಂದ ಮಾಹಿತಿ ಬಂದಿದೆ. ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಸಮಿತಿ ರಚಿಸಿ ಎಲ್ಲ ಸಮುದಾಯಗಳ ಬಗ್ಗೆ ಸಮಗ್ರ ಅಧ್ಯಯನ ನಡೆಸಿ ವರದಿ ನೀಡಬೇಕು ಎಂದು ಸೂಚನೆ ನೀಡಲಾಗಿದೆ.
ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡದಿದ್ದರೆ ಸಮುದಾಯದ ಇಬ್ಬರು ಸಚಿವರಿಗೆ ರಾಜಿನಾಮೆ ನೀಡುವಂತೆ ಯತ್ನಾಳ್ ಹೇಳಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಬಿ.ಸಿ. ಪಾಟೀಲ, ಅವರು ಹೇಳಿದ್ದಾರೆ ಅದಕ್ಕೆ ಉಳಿದವರು ಏನು ಉತ್ತರ ಕೊಡ್ತಾರೆ ನೋಡೋಣ ಎಂದು ಮುಗುಳ್ನಗುತ್ತಾ ಪ್ರತಿಕ್ರಿಯಿಸಿದರು.