ಕಲಬುರಗಿ:ದೇಶದಲ್ಲಿ ಪೌರತ್ವ ಕಾಯ್ದೆ ವಿರುದ್ಧದ ಕಿಚ್ಚು ಜೋರಾಗಿದ್ದು, ಎಡ ಪಕ್ಷಗಳು ಡಿಸೆಂಬರ್ 19ರಂದು ದೇಶಾದ್ಯಂತ ಕರೆ ನೀಡಿರುವ ಮುಷ್ಕರ ಬೆಂಬಲಿಸಿ ಕಲಬುರಗಿಯಲ್ಲಿ ನಾಳೆ ಬಂದ್ಗೆ ಕರೆ ನೀಡಲಾಗಿದೆ.
ಪೌರತ್ವ ತಿದ್ದುಪಡಿ ಕಾಯ್ದೆಗೆ ವಿರೋಧ: ನಾಳೆ ಕಲಬುರಗಿ ಬಂದ್ಗೆ ಕರೆ - ದೇಶದಲ್ಲಿ ಪೌರತ್ವ ಮಸೂದೆ ತಿದ್ದುಪಡಿ ವಿರುದ್ದದ ಕಿಚ್ಚು
ದೇಶದಲ್ಲಿ ಪೌರತ್ವ ಕಾಯ್ದೆ ವಿರುದ್ಧದ ಕಿಚ್ಚು ಜೋರಾಗಿದ್ದು, ಎಡ ಪಕ್ಷಗಳು ಡಿಸೆಂಬರ್ 19ರಂದು ದೇಶಾದ್ಯಂತ ಕರೆ ನೀಡಿರುವ ಮುಷ್ಕರ ಬೆಂಬಲಿಸಿ ಕಲಬುರಗಿಯಲ್ಲಿ ನಾಳೆ ಬಂದ್ಗೆ ಕರೆ ನೀಡಲಾಗಿದೆ.
ದೇಶದಲ್ಲಿ ಪೌರತ್ವ ಮಸೂದೆ ತಿದ್ದುಪಡಿ ವಿರುದ್ಧದ ಕಿಚ್ಚು ದಿನದಿಂದ ದಿನಕ್ಕೆ ಏರುತ್ತಲೆ ಹೊರಟಿದೆ. ಎಡಪಕ್ಷಗಳು ನಡೆಸುತ್ತಿರುವ ಮುಷ್ಕರ ಬೆಂಬಲಿಸಿ ನಾಳೆ ಕಲಬುರಗಿ ಬಂದ್ಗೆ ಕರೆ ನೀಡಲಾಗಿದೆ. ಪೀಪಲ್ಸ್ ಫೋರಂ ಸಂಘಟನೆ ನೇತೃತ್ವದಲ್ಲಿ ಬಂದ್ ಕರೆ ನೀಡಲಾಗಿದ್ದು, ಹಲವು ಸಂಘಟನೆಗಳು ಸಾಥ್ ನೀಡುತ್ತಿವೆ. ಡಿ. 19ಕ್ಕೆ ಕಲಬುರಗಿ ಬಂದ್ ಮಾಡುವ ಮೂಲಕ ಮಸೂದೆ ತಿದ್ದುಪಡಿಗೆ ವಿರೋಧ ವ್ಯಕ್ತಪಡಿಸಲಾಗುತ್ತಿದೆ. ಅಂಗಡಿ ಮುಂಗಟ್ಟು, ಶಾಲಾ-ಕಾಲೇಜು, ಅಟೋ ಸಂಚಾರ ಸ್ವಯಂ ಪ್ರೇರಣೆಯಿಂದ ಬಂದ್ ಮಾಡಿ ಬೆಂಬಲ ನೀಡುವಂತೆ ಸಂಘಟನೆ ನಾಯಕರು ಕಲಬುರಗಿ ಜನತೆಗೆ ಮನವಿ ಮಾಡಿದ್ದಾರೆ.
ಒಂದು ಹಂತದಲ್ಲಿ ಬಂದ್ ಯಶಸ್ವಿಗೊಳಿಸಲು ಪೀಪಲ್ಸ್ ಫೋರಂ ಮುಖಂಡರು ಪ್ರಯತ್ನಿಸುತ್ತಿದ್ದಾರೆ. ಆದರೆ ಬಂದ್ಗೆ ಜಿಲ್ಲಾಡಳಿತ ಯಾವುದೇ ಅನುಮತಿ ನೀಡಿಲ್ಲ ಎಂದು ಜಿಲ್ಲಾ ಪೊಲೀಸ್ ಆಯುಕ್ತರು ಸ್ಪಷ್ಟಪಡಿಸಿದ್ದಾರೆ. ನಾಳೆ ಕರ್ನಾಟಕ ಲೋಕಸೇವಾ ಆಯೋಗದಿಂದ ಮುಖ್ಯೋಪಾಧ್ಯಯರು, ಶಿಕ್ಷಕರು, ಗ್ರೂಪ್ ಎ ಹಾಗೂ ಗ್ರೂಪ್ ಬಿ ಹುದ್ದೆಗಳಿಗೆ ಲಿಖಿತ ಪರೀಕ್ಷೆ ನಡೆಯಲಿದೆ. ಪೂರ್ವನಿಯೋಜಿತ ಪರೀಕ್ಷೆಗೆ ಹಲವು ಜಿಲ್ಲೆಗಳಿಂದ ಅಭ್ಯರ್ಥಿಗಳು ಹಾಗೂ ಪೋಷಕರು ಆಗಮಿಸಲಿದ್ದಾರೆ. ಬಂದ್ ಕರೆ ನೀಡುವುದರಿಂದ ಅವರಿಗೆ ಸಾರಿಗೆ, ವಸತಿ, ಆಹಾರ ಸೇರಿದಂತೆ ಹಲವು ಸಮಸ್ಯೆಗಳು ಎದುರಾಗಲಿವೆ. ಇದು ಸಾವಿರಾರು ಜನ ಅಭ್ಯರ್ಥಿಗಳ ಭವಿಷ್ಯದ ಪರೀಕ್ಷೆಯಾಗಿದೆ. ಈ ಕಾರಣಕ್ಕಾಗಿ ಬಂದ್ಗೆ ಸಮ್ಮತಿ ಸೂಚಿಸಿಲ್ಲ ಎಂದು ಎಂ.ಎನ್.ನಾಗರಾಜ್ ಪ್ರಕಟಣೆ ಹೊರಡಿಸಿದ್ದಾರೆ.