ಕಲಬುರಗಿ: ಜಿಲ್ಲೆಯ ಆಳಂದ ತಾಲೂಕಿನ ಭೂಸನೂರು ಗ್ರಾಮದ ಕಿರಿಯ ಆರೋಗ್ಯ ಸಹಾಯಕಿ ಕಮಲಬಾಯಿ ಪುತ್ರ ಗುರುನಾಥ್ ಕೆಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣನಾಗುವ ಮೂಲಕ ಎಸಿ ಹುದ್ದೆಗೆ ಗಿಟ್ಟಿಸಿಕೊಂಡಿದ್ದು,ಇವರ ಸಾಧನೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
ಕೆಪಿಎಸ್ಸಿಯಲ್ಲಿ ಉತ್ತೀರ್ಣನಾಗುವ ಮೂಲಕ ಎಸಿ ಆದ ಆರೋಗ್ಯ ಸಹಾಯಕಿ ಪುತ್ರ! - Bhosanur is a village in the Kalaburagi district of the Aranda Taluk
ಜಿಲ್ಲೆಯ ಆಳಂದ ತಾಲೂಕಿನ ಭೂಸನೂರು ಗ್ರಾಮದ ಕಿರಿಯ ಆರೋಗ್ಯ ಸಹಾಯಕಿ ಕಮಲಬಾಯಿ ಪುತ್ರ ಗುರುನಾಥ್ ಕೆಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣನಾಗುವ ಮೂಲಕ ಎಸಿ ಹುದ್ದೆ ಗಿಟ್ಟಿಸಿಕೊಂಡಿದ್ದಾರೆ.
![ಕೆಪಿಎಸ್ಸಿಯಲ್ಲಿ ಉತ್ತೀರ್ಣನಾಗುವ ಮೂಲಕ ಎಸಿ ಆದ ಆರೋಗ್ಯ ಸಹಾಯಕಿ ಪುತ್ರ! KPSC passes AC exam by son of health care worker](https://etvbharatimages.akamaized.net/etvbharat/prod-images/768-512-5519044-thumbnail-3x2-sow.jpg)
ಗುರುನಾಥ್ ಮೂಲತಃ ಮಹಾರಾಷ್ಟ್ರದ ಗಡಿಯಲ್ಲಿರುವ ವಾಗ್ಧರಿ ಗ್ರಾಮದವರು. ತಂದೆ ಶಿವಪುತ್ರಪ್ಪ ಧಡ್ಡೆ, ತಾಯಿ ಕಮಲಬಾಯಿ. ಇವರು ಆಳಂದದಲ್ಲಿ ಕನ್ನಡ ಮಾಧ್ಯಮದಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣ ಪೂರೈಸಿ, ಬಳಿಕ ಕಲಬುರ್ಗಿಯಲ್ಲಿ ಪಿಯು ಶಿಕ್ಷಣ ಪೂರೈಸಿದ್ರು. ನಂತರ ವಿಜಯಪುರದಲ್ಲಿ ಎಂಜಿನಿಯರಿಂಗ್ ಮುಗಿಸಿ, ಖಾಸಗಿ ಕಂಪನಿಗಳಲ್ಲಿ ಉದ್ಯೋಗದ ಆಫರ್ ಸಿಕ್ಕರೂ ನೌಕರಿ ಮಾಡಲು ಹೋಗದೆ, ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧಗೊಂಡರು.
ದೆಹಲಿ, ಹೈದರಾಬಾದ್ ಹಾಗೂ ಬೆಂಗಳೂರುಗಳಲ್ಲಿ ಐದು ವರ್ಷಗಳ ಕಾಲ ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿ ಪಡೆದ ಬಳಿಕ ಎರಡನೇ ಪ್ರಯತ್ನದಲ್ಲಿ ಕೆಪಿಎಸ್ಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿ,ಎಸಿ ಹುದ್ದೆಗೆ ಆಯ್ಕೆಯಾಗಿದ್ದಾರೆ.