ಕರ್ನಾಟಕ

karnataka

ETV Bharat / city

ಖಮರುಲ್‌ ಇಸ್ಲಾಂ ಸಾಯಲು ಖರ್ಗೆ ಕಾರಣ: ಮಾಜಿ ಸಚಿವ ಚಿಂಚನಸೂರ್‌ ಆರೋಪ - ಖರ್ಗೆ

ಖರ್ಗೆ ಹೈಕಮಾಂಡ್​ಗೆ ಒತ್ತಡ ಹೇರಿ ತಮ್ಮ ಪುತ್ರನಿಗೇ ಸಚಿವ ಸ್ಥಾನ ಕೊಡಿಸಿದ್ದರು. ಸಚಿವ ಸ್ಥಾನ ಕೈತಪ್ಪಿದ್ದರಿಂದಲೇ ಪಾಪ ಖಮರುಲ್ ಅವರು ಎದೆ ಒಡೆದುಕೊಂಡು ಸತ್ತರು. ಈ ಬಾರಿ ಖರ್ಗೆ ಸೋಲಿಗೆ ಘಟಾನು ಘಟಿ ನಾಯಕರು ಬರಲಿದ್ದಾರೆ ಎಂದು ಮಾಜಿ ಸಚಿವ ಬಾಬೂರಾವ್​ ಚಿಂಚನಸೂರ್, ಮಲ್ಲಿಕಾರ್ಜುನ ಖರ್ಗೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಸಚಿವ ಚಿಂಚನಸೂರ್‌

By

Published : Feb 18, 2019, 7:07 PM IST

ಕಲಬುರಗಿ: ಈ ಸಾರಿಯ ಲೋಕಸಭಾ ಚುನುಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಲು ಘಟಾನುಘಟಿ ನಾಯಕರೇ ಸಿದ್ಧರಾಗಿದ್ದು, ಈ ಬಾರಿ ಖರ್ಗೆ ಸೋಲು ಖಚಿತ ಎಂದು ಮಾಜಿ ಸಚಿವ ಬಾಬೂರಾವ್​ ಚಿಂಚನಸೂರ್ ಹೇಳಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಮಲ್ಲಿಕಾರ್ಜುನ್‌ ಖರ್ಗೆಯವರು ಮಗನ ವ್ಯಾಮೋಹಕ್ಕೆ ಬಲಿಯಾಗಿ ಎಲ್ಲರನ್ನೂ ಕಾಂಗ್ರೆಸ್​ನಿಂದ ಹೊರ ಹಾಕುತ್ತಿದ್ದಾರೆ. ನನಗೆ ಹಾಗೂ ಖಮರುಲ್ ಇಸ್ಲಾಂ ಅವರಿಗೆ ಸಚಿವ ಸಂಪುಟದಿಂದ ಕೈಬಿಡಲಾಗಿತ್ತು. ಖರ್ಗೆ ಹೈಕಮಾಂಡ್​ಗೆ ಒತ್ತಡ ಹೇರಿ ತಮ್ಮ ಪುತ್ರನಿಗೇ ಸಚಿವ ಸ್ಥಾನ ಕೊಡಿಸಿದ್ದರು. ಸಚಿವ ಸ್ಥಾನ ಕೈತಪ್ಪಿದ್ದರಿಂದಲೇ ಪಾಪ ಖಮರುಲ್ ಅವರು ಎದೆ ಒಡೆದುಕೊಂಡು ಸತ್ತರು ಎಂದು ದೂರಿದರು.

ಮಾಜಿ ಸಚಿವ ಚಿಂಚನಸೂರ್‌

ಈ ಬಾರಿ ಖರ್ಗೆ ಸೋಲಿಗೆ ಘಟಾನು ಘಟಿ ನಾಯಕರು ಬರಲಿದ್ದಾರೆ ಎಂದು ಖರ್ಗೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ABOUT THE AUTHOR

...view details