ಕರ್ನಾಟಕ

karnataka

ETV Bharat / city

ಐವರು ಶಾಸಕರನ್ನು ಕೊಟ್ಟ ಕಲಬುರಗಿಗೇ ಇಲ್ಲ ಸಚಿವ ಸ್ಥಾನ: ಕರವೇ ಅಸಮಾಧಾನ - ಸಿಎಂ ಯಡಿಯೂರಪ್ಪ

ಕಲಬುರಗಿಯಲ್ಲೇ ಐವರು ಬಿಜೆಪಿ ಶಾಸಕರಿದ್ದಾರೆ. ಆದರೆ ಹೈ-ಕ ಕೇಂದ್ರ ಸ್ಥಾನವಾದ ಕಲಬುರಗಿ ಜಿಲ್ಲೆಗೆ ಒಂದೂ ಸಚಿವ ಸ್ಥಾನ ನೀಡದೆ ದ್ರೋಹ ಬಗೆಯಲಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಅಸಮಾಧಾನ ವ್ಯಕ್ತಪಡಿಸಿದೆ.

ರಾಜ್ಯ ಸರ್ಕಾರದ ವಿರುದ್ಧ ಕರವೇ ಅಸಮಾಧಾನ

By

Published : Aug 21, 2019, 5:18 PM IST

ಕಲಬುರಗಿ:ಹೈದರಾಬಾದ್ ಕರ್ನಾಟಕಕ್ಕೆ ಕೇವಲ ಒಂದು ಸಚಿವ ಸ್ಥಾನ ನೀಡುವ ಮೂಲಕ ಸಿಎಂ ಯಡಿಯೂರಪ್ಪ ದ್ರೋಹ ಬಗೆದಿದ್ದಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಆರೋಪಿಸಿದೆ.

ನಗರದಲ್ಲಿ ಮಾತನಾಡಿದ ಕರವೇ ರಾಜ್ಯ ಸಂಚಾಲಕ (ಶಿವರಾಮೇಗೌಡರ ಬಣ) ಮಂಜುನಾಥ ನಾಲವಾರಕರ್, ಹೈದರಾಬಾದ್ ಕರ್ನಾಟಕದಲ್ಲಿ 16 ಜನ ಬಿಜೆಪಿ ಶಾಸಕರು ಗೆದ್ದಿದ್ದಾರೆ. ಕಲಬುರಗಿಯಲ್ಲೇ ಐವರು ಬಿಜೆಪಿ ಶಾಸಕರಿದ್ದಾರೆ. ಆದರೆ ಹೈ-ಕ ಕೇಂದ್ರ ಸ್ಥಾನವಾದ ಕಲಬುರಗಿ ಜಿಲ್ಲೆಗೆ ಒಂದೂ ಸ್ಥಾನ ನೀಡದೆ ದ್ರೋಹ ಬಗೆಯಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಜ್ಯ ಸರ್ಕಾರದ ವಿರುದ್ಧ ಕರವೇ ಅಸಮಾಧಾನ

ರಾಜ್ಯ ಸರ್ಕಾರದ ಮಲತಾಯಿ ಧೋರಣೆ ಖಂಡಿಸಿ, ಸೆಪ್ಟಂಬರ್ 17 ರಂದು ವಿಮೋಚನಾ ದಿನಾಚರಣೆಗೆ ಬರುವ ಸಿಎಂ ಯಡಿಯೂರಪ್ಪಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಪ್ರತಿಭಟಿಸುವುದಾಗಿ ನಾಲವಾರಕರ್ ಎಚ್ಚರಿಕೆ ನೀಡಿದ್ದಾರೆ.

ABOUT THE AUTHOR

...view details