ಕರ್ನಾಟಕ

karnataka

ETV Bharat / city

ಗ್ರಾಪಂ ಚುನಾವಣೆಯಲ್ಲಿ ಮತ್ತೊಂದು ಕ್ಷೇತ್ರದ ಮತಪತ್ರಗಳ ಬಳಕೆ: ಮತಗಳನ್ನು ಅಸಿಂಧುಗೊಳಿಸಲು ನಿರಾಕರಿಸಿದ ಹೈಕೋರ್ಟ್ - Karnataka High Court Verdict

2021ರಲ್ಲಿ ನಡೆದಿದ್ದ ಕಾರ್ಲೆ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಅಭ್ಯರ್ಥಿಗಳಾದ ಪ್ರಭಾಮಣಿ 232 ಮತ ಹಾಗೂ ಹೇಮಲತಾ 321 ಮತ ಗಳಿಸಿದ್ದರು. ಈ ವೇಳೆ, ಬೇರೊಂದು ಕ್ಷೇತ್ರದ 4 ಮತಪತ್ರಗಳು ಈ ಕ್ಷೇತ್ರದಲ್ಲಿ ಬಳಕೆಯಾಗಿದ್ದು, ಇವುಗಳ ಮೂಲಕ ಚಲಾವಣೆಯಾಗಿದ್ದ 4 ಮತಗಳು ಹೇಮಲತಾ ಅವರಿಗೆ ಸೇರಿದ್ದವು. ಆದರೆ, ಚುನಾವಣಾಧಿಕಾರಿಗಳು ಬೇರೆ ಕ್ಷೇತ್ರದ ಮತಪತ್ರಗಳು ಎಂಬ ಕಾರಣಕ್ಕೆ ಅವುಗಳನ್ನು ಪರಿಗಣಿಸಿರಲಿಲ್ಲ..

Karnataka High Court
ಕರ್ನಾಟಕ ಹೈಕೋರ್ಟ್

By

Published : Apr 8, 2022, 7:24 AM IST

ಬೆಂಗಳೂರು :ಒಂದು ಕ್ಷೇತ್ರದ ಮತ ಚೀಟಿಗಳು ಮತ್ತೊಂದು ಕ್ಷೇತ್ರದ ಚುನಾವಣೆಯಲ್ಲಿ ಬಳಕೆಯಾಗಿವೆ ಎಂಬ ಕಾರಣಕ್ಕೆ ಚಲಾವಣೆಯಾಗಿರುವ ಮತಗಳನ್ನು ಅಸಿಂಧುಗೊಳಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿದೆ. ಹಾಸನ ತಾಲೂಕಿನ ಕಾರ್ಲೆ ಗ್ರಾಮ ಪಂಚಾಯತ್‌ ಚುನಾವಣೆಗೆ ಸಂಬಂಧಿಸಿದಂತೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಪೀಠ ಈ ತೀರ್ಪು ನೀಡಿದೆ.

ಪೀಠ ತನ್ನ ತೀರ್ಪಿನಲ್ಲಿ, ಇದೊಂದು ಅಪರೂಪದ ಪ್ರಕರಣ. ಇಲ್ಲಿ ಗೆಲುವಿನ ಮತಗಳ ಅಂತರಾ ತೀರಾ ಕಡಿಮೆ ಇದೆ. ಹೀಗಾಗಿಯೇ, ಇಲ್ಲಿ ಮತಪತ್ರಗಳ ಪರಿಶೀಲನೆಗೆ ಹೆಚ್ಚಿನ ಮಹತ್ವವಿದೆ. ಪ್ರಕರಣದಲ್ಲಿ ಬೇರೊಂದು ಕ್ಷೇತ್ರಕ್ಕೆ ಸಂಬಂಧಿಸಿದ ಮತಪತ್ರಗಳು ಬಳಕೆಯಾಗಿರುವುದು ದಾಖಲೆಗಳಿಂದಲೇ ಸ್ಪಷ್ಟವಾಗಿದೆ. ಎರಡು ಮತಪತ್ರಗಳಲ್ಲೂ ಒಂದೇ ರೀತಿಯ ಚುನಾವಣಾ ಚಿಹ್ನೆಗಳಿದ್ದು, ಚುನಾವಣಾಧಿಕಾರಿಗಳು ಪರಿಶೀಲನೆಯ ನಂತರವೇ ಮತಚೀಟಿಗಳನ್ನು ಮತದಾರರಿಗೆ ನೀಡಿದ್ದಾರೆ. ಅದರಂತೆ ಮತದಾರರು ತಮ್ಮ ಮತ ಚಲಾಯಿಸಿದ್ದಾರೆ.

ಹಾಗೆಯೇ, ಚುನಾವಣೆಯಲ್ಲಿ ಬಳಕೆ ಮಾಡಿರುವ ಬೇರೊಂದು ಕ್ಷೇತ್ರದ ಮತಪತ್ರಗಳನ್ನು ಅಧಿಕಾರಿಗಳು ಗುರುತು ಹಾಕಿದ್ದಾರೆ. ಅಧಿಕಾರಿಗಳು ನೀಡಿದ ಮತಪತ್ರಗಳನ್ನೇ ಬಳಸಿ ಮತ ಚಲಾವಣೆ ಮಾಡಿರುವುದರಿಂದ, ಮತಪತ್ರ ನಕಲು ಮಾಡಲಾಗಿದೆ ಅಥವಾ ಅಕ್ರಮ ನಡೆದಿದೆ ಎನ್ನಲಾಗದು. ಆದ್ದರಿಂದ ಬೇರೆ ಕ್ಷೇತ್ರದ ಮತಪತ್ರಗಳನ್ನು ಬಳಸಿ ಚಲಾಯಿಸಿರುವ ಮತಗಳನ್ನು ಅಸಿಂಧು ಎಂದು ಹೇಳಲಾಗದು ಎಂದು ಅಭಿಪ್ರಾಯಪಟ್ಟು, ಚುನಾವಣಾ ನ್ಯಾಯಮಂಡಳಿಯ ನಿರ್ಣಯದಂತೆ ಹೇಮಲತಾ ಗೆಲುವು ಸರಿಯಿದೆ ಎಂದು ಆದೇಶಿಸಿದೆ.

ಪ್ರಕರಣದ ಹಿನ್ನೆಲೆ :2021ರಲ್ಲಿ ನಡೆದಿದ್ದ ಕಾರ್ಲೆ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಅಭ್ಯರ್ಥಿಗಳಾದ ಪ್ರಭಾಮಣಿ 232 ಮತ ಹಾಗೂ ಹೇಮಲತಾ 321 ಮತ ಗಳಿಸಿದ್ದರು. ಈ ವೇಳೆ, ಬೇರೊಂದು ಕ್ಷೇತ್ರದ 4 ಮತಪತ್ರಗಳು ಈ ಕ್ಷೇತ್ರದಲ್ಲಿ ಬಳಕೆಯಾಗಿದ್ದವು. ಇವುಗಳ ಮೂಲಕ ಚಲಾವಣೆಯಾಗಿದ್ದ 4 ಮತಗಳು ಹೇಮಲತಾ ಅವರಿಗೆ ಸೇರಿದ್ದವು. ಆದರೆ, ಚುನಾವಣಾಧಿಕಾರಿಗಳು ಬೇರೆ ಕ್ಷೇತ್ರದ ಮತಪತ್ರಗಳು ಎಂಬ ಕಾರಣಕ್ಕೆ ಅವುಗಳನ್ನು ಪರಿಗಣಿಸಿರಲಿಲ್ಲ.

ಇದರಿಂದ ಹೇಮಲತಾ ಅವರು ಚುನಾವಣಾ ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಿದ್ದರು. ಮನವಿ ಪರಿಗಣಿಸಿದ ಚುನಾವಣಾ ನ್ಯಾಯಮಂಡಳಿ ಆ 4 ಮತಪತ್ರಗಳನ್ನು ಪರಿಗಣಿಸಿ, ಹೇಮಲತಾ ಅವರನ್ನು ವಿಜಯಿ ಎಂದು ಘೋಷಿಸಿತ್ತು. ಈ ಆದೇಶ ರದ್ದು ಕೋರಿ ಪ್ರಭಾಮಣಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಇದನ್ನೂ ಓದಿ:ಬಿಸಿಯೂಟ ನೌಕರರಿಗೆ ಗುಡ್​​ ನ್ಯೂಸ್ ​​: ಗೌರವಧನ ₹1,000 ಹೆಚ್ಚಿಸಿ ಆದೇಶ

ABOUT THE AUTHOR

...view details