ಕಲಬುರಗಿ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಲಾಕ್ಡೌನ್ ಘೋಷಣೆ ಮಾಡಲಾಗಿದೆ.
ಇಂದಿನಿಂದ ಒಂದು ವಾರ ಕಲಬುರಗಿ ಬಂದ್.... ಅಗತ್ಯ ಸೇವೆಗಳಿಗಷ್ಟೇ ರಿಯಾಯಿತಿ - ಕಲಬುರಗಿ ಕೊರೊನಾ
ಪೂರ್ವ ಸಿದ್ಧತೆ ಮಾಡಿಕೊಳ್ಳದೇ ರಾತ್ರೋರಾತ್ರಿ ಕಲಬುರಗಿಯಲ್ಲಿ ಲಾಕ್ಡೌನ್ ಆದೇಶ ಹೊರಡಿಸಿರುವುದರಿಂದ ಹಾಗೂ ಆದೇಶದಲ್ಲಿ ಕೇವಲ ದಿನಾಂಕ ಮಾತ್ರ ಉಲ್ಲೇಖಿಸಿ, ಸಮಯ ಉಲ್ಲೇಖಿಸದ ಕಾರಣ ಜನರಲ್ಲಿ ಗೊಂದಲ ಉಂಟಾಗುವಂತೆ ಮಾಡಿದೆ.
ಕಲಬುರಗಿ ನಗರ ಸೇರಿದಂತೆ ಜಿಲ್ಲೆಯ ವಿವಿಧ ನಗರ - ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಜುಲೈ 14 ರಿಂದ 20ರ ವರೆಗೆ ಅಂದರೆ ಇಂದಿನಿಂದ 7 ದಿನಗಳ ಕಾಲ ಲಾಕ್ಡೌನ್ ಜಾರಿಗೆ ತರಲಾಗಿದೆ. ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲದೇ, ಪಟ್ಟಣ ಪ್ರದೇಶಗಳ ವ್ಯಾಪ್ತಿಯಲ್ಲಿ ಜುಲೈ 20 ರವರೆಗೆ ಲಾಕ್ಡೌನ್ ಮುಂದುವರೆಸುವಂತೆ ಜಿಲ್ಲಾಧಿಕಾರಿ ಶರತ್ ಬಿ. ಆದೇಶಿಸಿದ್ದಾರೆ.
ಆದರೆ ಲಾಕ್ಡೌನ್ಗೆ ಜಿಲ್ಲೆಯಲ್ಲಿ ಇಂದು ಉತ್ತಮ ಪ್ರತಿಕ್ರಿಯೆ ಸಿಕ್ಕಿಲ್ಲ. ಜಿಲ್ಲಾಡಳಿತ ಸಾರಿಗೆ ಬಸ್ ಸಂಚಾರಕ್ಕೆ ವಿನಾಯಿತಿ ನೀಡಿರುವುದರಿಂದ ಆಟೋ, ಬೈಕ್, ಕಾರು ಮತ್ತಿತರ ವಾಹನ ಸಂಚಾರ ಎಂದಿನಂತೆ ಸಾಗಿದೆ. ಅಲ್ಲಲ್ಲಿ ಹೋಟೆಲ್ ಹಾಗೂ ಅಂಗಡಿಗಳನ್ನು ಸಹ ತರೆಯಲಾಗಿದೆ. ಪೂರ್ವ ಸಿದ್ಧತೆ ಮಾಡಿಕೊಳ್ಳದೇ ರಾತ್ರೋರಾತ್ರಿ ಲಾಕ್ಡೌನ್ ಆದೇಶ ಹೊರಡಿಸಿರುವುದರಿಂದ ಹಾಗೂ ಆದೇಶದಲ್ಲಿ ಕೇವಲ ದಿನಾಂಕ ಮಾತ್ರ ಉಲ್ಲೇಖಿಸಿ, ಸಮಯ ಉಲ್ಲೇಖಿಸದ ಕಾರಣ ಜನರಲ್ಲಿ ಗೊಂದಲ ಉಂಟಾಗಿದೆ.