ಕರ್ನಾಟಕ

karnataka

ETV Bharat / city

ಕಲಬುರಗಿ ವಿವಿ ವಸತಿ ನಿಲಯದಲ್ಲಿ ಅವ್ಯವಸ್ಥೆ.. ಆಡಳಿತ ಮಂಡಳಿ ವಿರುದ್ಧ ವಿದ್ಯಾರ್ಥಿಗಳು ಗರಂ - ಜ್ಞಾನಗಂಗಾ ವಿಶ್ವವಿದ್ಯಾಲಯ ವಸತಿ ನಿಲಯ ಅವ್ಯವಸ್ಥೆ

ಗುಲ್ಬರ್ಗ ವಿಶ್ವವಿದ್ಯಾಲಯ ಆವರಣದಲ್ಲಿ ಸಂಶೋಧನಾ ವಿಧ್ಯಾರ್ಥಿಗಳ ನೃಪತುಂಗ ವಸತಿ ನಿಲಯದಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳಿಲ್ಲ, ಉತ್ತಮ ಆಹಾರ, ಶುದ್ಧ ಕುಡಿಯುವ ನೀರು ಸಮರ್ಪಕವಾಗಿ ಸಿಗುತ್ತಿಲ್ಲವಂತೆ, ಅಲ್ಲದೇ ಶೌಚಾಲಯಗಳು ಹಾಗೂ ಊಟದ ಕೋಣೆಗಳು ಗಬ್ಬು ದುರ್ವಾಸನೆಯಿಂದ ಕೂಡಿದೆ ಎಂದು ವಸತಿ ನಿಲಯದ ವಿಧ್ಯಾರ್ಥಿಗಳು ಆರೋಪಿಸಿದ್ದಾರೆ.

kalaburagi-university-hostel-problem
ಕಲಬುರಗಿ ವಿವಿ ವಸತಿ ನಿಲಯ

By

Published : Feb 13, 2020, 10:01 PM IST

ಕಲಬುರಗಿ:ನಗರದ ಜ್ಞಾನಗಂಗಾ ವಿಶ್ವವಿದ್ಯಾಲಯದ ವಿದ್ಯಾರ್ಥಿ ವಸತಿ ನಿಲಯದಲ್ಲಿ ಮೂಲ ಸೌಕರ್ಯಗಳು ಇಲ್ಲದೆ ವಿದ್ಯಾರ್ಥಿಗಳು ವಿವಿ ಆಡಳಿತ ಮಂಡಳಿಯ ವಿರುದ್ಧ ಹಿಡಿ ಶಾಪ ಹಾಕುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

ಗುಲ್ಬರ್ಗ ವಿಶ್ವವಿದ್ಯಾಲಯ ಆವರಣದಲ್ಲಿ ಸಂಶೋಧನಾ ವಿಧ್ಯಾರ್ಥಿಗಳ ನೃಪತುಂಗ ವಸತಿ ನಿಲಯದಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳಿಲ್ಲ, ಉತ್ತಮ ಆಹಾರ, ಶುದ್ಧ ಕುಡಿಯುವ ನೀರು ಸಮರ್ಪಕವಾಗಿ ಸಿಗುತ್ತಿಲ್ಲವಂತೆ, ಅಲ್ಲದೇ ಶೌಚಾಲಯಗಳು ಹಾಗೂ ಊಟದ ಕೋಣೆಗಳು ಗಬ್ಬು ದುರ್ವಾಸನೆಯಿಂದ ಕೂಡಿದೆ ಎಂದು ವಸತಿ ನಿಲಯದ ವಿಧ್ಯಾರ್ಥಿಗಳು ಆರೋಪಿಸಿದ್ದಾರೆ.

ಕಲಬುರಗಿ ವಿವಿ ವಸತಿ ನಿಲಯದಲ್ಲಿ ಅವ್ಯವಸ್ಥೆ

ನೃಪತುಂಗ ವಸತಿ ನಿಲಯದಲ್ಲಿ ಸುಮಾರು 60 ಜನ ವಿದ್ಯಾರ್ಥಿಗಳಿದ್ದು. ಹಲವು ದಿನಗಳಿಂದ ಸೌಕರ್ಯಗಳ ಕೊರತೆ ಇದೆ. ಸತತ ಹೊರಾಟ ಮಾಡಿದರು ಸಂಬಂಧ ಪಟ್ಟವರು ಮೌನಕ್ಕೆ ಶರಣಾಗಿದ್ದಾರೆ. ಪ್ರತಿಭಟನೆಗೆ ಇಳಿದಾಗ ಆಶ್ವಾಸನೆ ಕೊಡುವ ಅಧಿಕಾರಿಗಳು ನಂತರ ಇತ್ತ ತೆಲೆಯೂ ಹಾಕುವದಿಲ್ವಂತೆ, ವಿದ್ಯುತ್ ದೀಪಗಳು ಹಾಗೂ ಫ್ಯಾನ್ ಗಳಿಲ್ಲದೇ ಓದಲು ಉತ್ತಮ ವಾತಾವರಣ ಸಿಗ್ತಿಲ್ಲ, ಕೇವಲ 60 ಜನ ವಿದ್ಯಾರ್ಥಿಗಳು ವಸತಿ ನಿಲ್ಲಯದಲ್ಲಿದ್ದಾರೆ.

ಆದ್ರೆ ತಿಂಗಳಿಗೆ 300 ವಿಧ್ಯಾರ್ಥಿಗಳು ವಾಸವಾಗಿದ್ದಾರೆ ಎಂದು ನಕಲಿ ಬಿಲ್ ಸೃಷ್ಟಿಸಿ ತಿಂಗಳಿಗೆ ಲಕ್ಷಾಂತರ ರೂಪಾಯಿ ಕೊಳ್ಳೆ ಹೊಡೆಯಲಾಗುತ್ತಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಇನ್ನು ಈ ಬಗ್ಗೆ ವಿವಿ ಪ್ರಭಾರಿ ಕುಲಪತಿ ದೇವಿದಾಸ್ ಮಾಲೆ ಅವರನ್ನು ಕೇಳಿದ್ರೆ ತಕ್ಷಣ ಸಮಸ್ಯೆಗಳನ್ನು ಬಗೆ ಹರಿಸುವುದಾಗಿ ಹೇಳ್ತಿದ್ದಾರೆ.

ಕಳೆದ ಎರಡು ವರ್ಷದಿಂದ ವಿವಿಗೆ ಕುಲಪತಿಗಳು ಇಲ್ಲ, ಪ್ರಭಾರಿ ಕುಲಪತಿಗಳಿಗೆ ಮೇಲೆ ನಡೆಯುತ್ತಿರುವ ವಿವಿಯಲ್ಲಿ ಸಿಬ್ಬಂದಿ ಆಡಿದ್ದೇ ಆಟ ಮಾಡಿದ್ದೆ ಪಾಠ ಎನ್ನುವಂತಾಗಿದೆ. ಇನ್ನಾದ್ರೂ ಸರ್ಕಾರ ಎಚ್ಚೆತ್ತು ಕುಲಪತಿಗಳ ನೇಮಕ ಮಾಡಿ ಅವ್ಯವಸ್ಥೆಯ ಆಗರವಾಗಿರುವ ವಿವಿಯಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲಕರ ವಾತಾವರಣ ನಿರ್ಮಿಸಿ ಕೊಡುವತ್ತ ಗಮನ ಹರಿಸಬೇಕಿದೆ.

For All Latest Updates

TAGGED:

ABOUT THE AUTHOR

...view details